ಮೂಡಲಗಿ: ಮೂಡಲಗಿಯ ಶಿವಬೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಪ್ರಸಕ್ತ ಮಾರ್ಚ 31ಕ್ಕೆ 6.40 ಕೊಟಿ ರೂ ನಿವ್ವಳ ಲಾಭವನ್ನುಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸೈಟಿಯ ಅಧ್ಯಕ್ಷ ಬಸವರಾಜ ಗುಲಗಾಜಂಬಗಿ ಹೇಳಿದರು. ಪಟ್ಟಣದ ಶ್ರೀ ಶಿವಬೋಧರಂಗ ಅರ್ಬನ್ ಸೊಸೈಟಿಯ 2024-25ನೇ ಸಾಲಿನ ಪ್ರಗತಿ ಕುರಿತು ಕರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸೊಸೈಟಿಯು ಸದ್ಯ 6.41 ಕೋಟಿ ರೂ ಶೇರು ಬಂಡವಾಳ, 401.62 ಕೋಟಿ ರೂ ಠೇವುಗಳನ್ನು ಸಂಗ್ರಹಿಸಿದ್ದು, 245.06 …
Read More »ಆರ್ಥಿಕವಾಗಿ ಬೆಳೆಯಲು ಸಹಕಾರಿ ಸಂಸ್ಥೆಗಳ ಪಾತ್ರ ಮುಖ್ಯ- ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ
ಘಟಪ್ರಭಾ: ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗಲು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯು ಆರ್ಥಿ ಕವಾಗಿ ಬೆಳೆಯಲು ಸಹಕಾರಿ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ ಎಂದು ಸಹಕಾರಿಯ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು. ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ.,ಕಲ್ಲೋಳಿ ಇದರ ಘಟಪ್ರಭಾ ಶಾಖೆಯ 3ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ಸಹಕಾರಿಯು 2785 ಸದಸ್ಯರನ್ನು ಹೊಂದಿ, 16.08 ಕೋಟಿ ಠೇವು ಸಂಗ್ರಹಿಸಿ, …
Read More »ಗ್ರಾ.ಪಂ ಕಟ್ಟಡ ಮತ್ತು ಹೇಮರಡ್ಡಿ ಮಲ್ಲಮ್ಮ ವೃತ್ತ ಉದ್ಘಾಟನ
ಮೂಡಲಗಿ: ತಾಲೂಕಿನ ಯಾದವಾಡ ಬಳಿಯ ಕಾನಕಟ್ಟಿಯ ಗ್ರಾಮ ಪಂಚಾಯತ ಕಾರ್ಯಾಲಯ ನೂತನ ಕಟ್ಟಡ ಹಾಗೂ ಶಿವರಣೆ ಹೇಮರಡ್ಡಿ ಮಲ್ಲಮ್ಮ ನೂತನ ವೃತ್ತ ಉದ್ಘಾಟನೆ ಹಾಗೂ ತಾಲೂಕಾ ಮಟ್ಟದ ಮಹಾಸಾದ್ವಿ ಶ್ರೀ ಹೇಮರಡ್ಡಿ ಮಲ್ಲಮ್ಮಳ 603ನೇ ಜಯಂತ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ಮೇ.14 ರಂದು ಕಾಮನಕಟ್ಟಿ ಗ್ರಾ.ಪಂ ಕಾರ್ಯಾಲಯ ಆವರಣದಲ್ಲಿ ಏರ್ಪಡಿಸಲಾಗಿದೆ ಸಂಘಟಕರು ಪ್ರಕಟನೆಯ ತಿಳಿಸಿದ್ದಾರೆ. ಬುಧವಾರ ಮುಂಜಾನೆ 7+30ರಿಂದ 9 ಗಂಟೆವರಿಗೆ ಕುಂಭ ಹಾಗೂ ವಾದ್ಯ ಮೆಳಗಳೊಂದಿಗೆ …
Read More »ರಕ್ತದಾನ ಶಿಬಿರ ಮತ್ತು ಪ್ರತಿಭಾ ಶೋಧ ಪರೀಕ್ಷೆಯ
ಮೂಡಲಗಿ: ಪಟ್ಟಣದ ಲಯನ್ಸ್ ಎಜುಕೇಶನ್ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ವಿ ಬಿ ಸೋನವಾಲ್ಕರ್ ಆಂಗ್ಲ ಮಾಧ್ಯಮ ಶಾಲೆ, ಶ್ರೀ ಬಿ ವಿ ಸೋನವಾಲ್ಕರ್ ಪಬ್ಲಿಕ್(ಸಿಬಿಎಸ್‍ಇ) ಶಾಲೆ ಹಾಗೂ ಶಿವರಾಮದಾದಾ ಕನ್ನಡ ಮಾಧ್ಯಮ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ದಿ.ವೀರಣ್ಣ ಈಶ್ವರಪ್ಪ ಹೊಸೂರ ಇವರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಬುಧವಾರ ಮೇ.14 ರಂದು ರಕ್ತದಾನ ಶಿಬಿರ ಮತ್ತು ಪ್ರತಿಭಾ ಶೋಧ ಪರೀಕ್ಷೆಯ ಹಮ್ಮಿಕೊಳ್ಳಲಾಗಿದೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪಟ್ಟಣದ ಬಸವನಗದಲ್ಲಿನ ಶ್ರೀ ಬಿ.ವಿ.ಸೋಂವಾಲ್ಕರ್ …
Read More »ಪಾಂಡುರಂಗ ಮತ್ತು ಮಹರ್ಷಿ ವಾಲ್ಮೀಕಿ ದೇವಸ್ಥಾನಗಳ ಕಳಸಾರೋಹನ ಹಾಗೂ ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆ
ಮೂಡಲಗಿ: ತಾಲೂಕಿನ ಪುಲಗಡ್ಡಿ ಗ್ರಾಮದಲ್ಲಿ ಶ್ರೀ ಪಾಂಡುರಂಗ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನಗಳ ಕಳಸಾರೋಹನ, ಜಾತ್ರಾ ಮಹೋತ್ಸವ, ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನೆ ಹಾಗೂ ದಾನಿಗಳಿಗೆ ಸನ್ಮಾನ ಸಮಾರಂಭ ಬುಧವಾರ ಮೇ.14 ರಂದು ಮುಂಜಾನೆ 10=30ಕ್ಕೆ ಜರುಗಲಿದೆ ಎಂದು ಜಾತ್ರಾ ಕಮಿಟಿ ಅವರು ತಿಳಿಸಿದ್ದಾರೆ. ಸಮಾರಂಭದ ಸಾನ್ನಿಧ್ಯವನ್ನು ಮುಕ್ತಿಮಠದ ಶ್ರೀ ಶಿವಶಿದ್ಧಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ, ಪಂಡರಪೂರದ ಶ್ರೀ ಹ ಬ ಗೋಪಾಲ ತುಕಾರಾಮ ವಾಸ್ಕರ್, ಬಬಲಾದಿಯ …
Read More »ಉಚಿತ ಬೇಸಿಗೆ ಶಿಬಿರದ ಆಯೋಜನೆ, ರಜಾ ಅವಧಿಯಲ್ಲೂ ಬಡ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ
ಮೂಡಲಗಿ: ರಜಾ ಅವಧಿಯಲ್ಲೂ ಬಡ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕಾಗಿ ಯುವ ಶಿಕ್ಷಕ ಶಿವರಾಜ ಕಾಂಬಳೆ ಅವರು ಕಳೆದ ಮೂರು ವರ್ಷಗಳಿಂದ ಉಚಿತ ಬೇಸಿಗೆ ಶಿಬಿರದ ಆಯೋಜನೆ ಮಾಡಿ ಮಕ್ಕಳ ಕಲಿಕೆಯ ಸುಧಾರಣೆಗೆ ಶ್ರಮಸುತ್ತಿರುವುದು ಶ್ಲಾಘನಿಯವಾದದ್ದು ಎಂದು ಬಿಇಒ ಅಜೀತ ಮನ್ನಿಕೇರಿ ಹೇಳಿದರು. ತಾಲೂಕಿನ ಧರ್ಮಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿವರಾಜ ಕಾಂಬಳೆ ಅವರು ಸತತ 3ನೇ ವರ್ಷವೂ ನಡೆಸುತ್ತಿರುವ …
Read More »*ಕರ್ನಲ್ ಸೋಫಿಯಾ ಮಾವನವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸನ್ಮಾನ*
ಗೋಕಾಕ: ಗೋಕಾಕನಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಮಾವ ಗೌಸಸಾಬ್ ಬಾಗೇವಾಡಿ ಅವರನ್ನು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಕರ್ನಲ್ ಸೋಫಿಯಾ ಖುರೇಷಿ ಅವರು ಗೋಕಾಕ ಕ್ಷೇತ್ರದ ಸೊಸೆ ಎಂಬುವುದೇ ದೊಡ್ಡ ಹೆಮ್ಮೆ. ಅವರು ಕೇವಲ ಸೊಸೆ ಮಾತ್ರವಲ್ಲ, ಈ ಭಾಗದ ಮಗಳು ಹೌದು. ಅವರ ಸಾಧನೆಯನ್ನು ಇಡೀ ದೇಶವೇ ಹೆಮ್ಮೆಪಡುವಂತಾಗಿದೆ. ಗೋಕಾಕ ಹೆಸರನ್ನು ಇಡೀ …
Read More »*ಅಷ್ಟ ಬಂಧ ಪ್ರತಿಷ್ಠಾ, ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ತೆರೆ*
ಗೋಕಾಕ: ಗೋಕಾವಿ ನಾಡಿನ ಶಕ್ತಿ ದೇವತೆಯಾದ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಮಧ್ಯ ಸಡಗರ ಸಂಭ್ರಮದಿಂದ ಬುಧವಾರ ರಾತ್ರಿ ಜರುಗಿತು. ಏಪ್ರಿಲ್ ೩೦ ರಿಂದ ಆರಂಭಗೊಂಡಿರುವ ಅಷ್ಠ ಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಮಹಾ ರಥೋತ್ಸವ ಕಾರ್ಯಕ್ರಮಕ್ಕೆ ಅಪಾರ ಭಕ್ತರು ಆಗಮಿಸಿ ದೇವಿಯರ ದರ್ಶನ ಪಡೆದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮುಂದಾಳತ್ವದಲ್ಲಿ ಕಳೆದ ೮ ದಿನಗಳಿಂದ ಅತಿ ವಿಜೃಂಭಣೆಯಿಂದ ದೇವರುಗಳ ಮೂರ್ತಿ ಪ್ರತಿಷ್ಠಾಪನೆ, …
Read More »‘ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಆತ್ಮವಿಶ್ವಾಸ ಇದ್ದರೆ ಯಶಸ್ಸು ಖಚಿತ’- ಸಾಹಿತಿ ಬಾಲಶೇಖರ ಬಂದಿ
ಮೂಡಲಗಿ: ‘ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿದರೆ ಖಂಡಿತ ಯಶಸ್ಸು ದೊರೆಯುತ್ತದೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ ಕಮಲದಿನ್ನಿಯ ಮಾರುತೇಶ್ವರ ಓಕುಳಿ, ರಥೋತ್ಸವ ಅಂಗವಾಗಿ ಮಹಾಲಕ್ಷ್ಮೀದೇವಿ ಸಮಿತಿಯ ಸಹಯೋಗದಲ್ಲಿ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮದ ಉದ್ಘಾಟನೆ ಮತ್ತು ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮಾಡಿರುವ ಸಾಧನೆಯು ನಿಮ್ಮ ಸಾಧನೆ …
Read More »ಇಂದು, ಬೀಜೋಪಚಾರ ಮತ್ತು ಬೀಜ ತಯಾರಿಕೆಯ ಮಹತ್ವದ ಕುರಿತು ಅಂತರ್ಜಾಲ ತರಬೇತಿ ಕಾರ್ಯಕ್ರಮ
ಮೂಡಲಗಿ: ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಮೇ.7 ಬುಧವಾರದಂದು ಮುಂಗಾರು ಹಂಗಾಮಿನಲ್ಲಿ ಬೀಜೋಪಚಾರ ಮತ್ತು ಬೀಜ ತಯಾರಿಕೆಯ ಮಹತ್ವ ಕುರಿತು ಮು.11 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಂತರ್ಜಾಲ ತರಬೇತಿಯನ್ನು ಆಯೋಜಿಸಿದ್ದು ಅರಭಾವಿಯ ಕಿತ್ತೂರು ರಾಣಿ ಚೆನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯದ ಬೀಜ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ದೀಲಿಪಕುಮಾರ ಮಸೂತಿ ಅವರು ಉಪನ್ಯಾಸ ನೀಡುವರು. ಆಸಕ್ತರು https://meet.goole.com/vbd- nmmt- twn ಲಿಂಕ್ ಕ್ಲಿಕ್ ಮಾಡುವ ಮೂಲಕ …
Read More »