ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಗೊಂಡ ಈರಣ್ಣ ಕಡಾಡಿಯವರಿಗೆ ಅಭಿನಂದನೆ ಸಲ್ಲಿಕೆ ರಾಜ್ಯ_ಸಭೆಗೆ ಆಯ್ಕೆಯಾಗಿ ಪ್ರಥಮ ಬಾರಿಗೆ ಮೂಡಲಗಿ ನಗರಕ್ಕೆ ಆಗಮಿಸಿದ ಸನ್ಮಾನ್ಯ ಈರಪ್ಪ ಕಡಾಡಿ ಅವರಿಗೆ ಯುವ ಜೀವನ ಸೇವಾ ಸಂಸ್ಥೆಯಿಂದ ಶಾಲಾ ಮಕ್ಕಳ ಪರಿಕರಗಳನ್ನು ನಿಡಿ ಸತ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಈರಪ್ಪ ಢವಳೇಶ್ವರ ಸದಸ್ಯರುಗಳು ಹಾಗು ಬಿ ಜೆ ಪಿ ಮುಖಂಡರಾದ ಪ್ರಕಾಶ ಮಾದರ , ಡಾ// ಬಿ.ಎಸ್.ಬಾಬನ್ನವರ, ಬಿ.ಬಿ.ಹಂದಿಗುಂದ, ಮಲ್ಲಪ್ಪ ಮದಗುಣಕಿ, ಶಿವಬಸು …
Read More »ಕೊರೋನಾ ರೋಗ ಭೀತಿಯಿಲ್ಲದೇ ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಯಲು ಸಕಲ ಸಿದ್ದತೆಗಳನ್ನು ಮಾಡಲಾಗಿದೆ- ಅಜಿತ ಮನ್ನಿಕೇರಿ
ಮೂಡಲಗಿ: ಮಾರ್ಚ್ ತಿಂಗಳಲ್ಲಿ ಜರುಗಬೇಕಾಗಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಕೊರೋನಾ ವೈರಸ್ ಕೊವಿಡ್-19 ಹಿನ್ನೆಲೆಯಲ್ಲಿ ಮುಂದೂಡಿದ್ದ ಪರೀಕ್ಷೆಗಳು ಜೂನ್ 25 ರಿಂದ ಪ್ರಾರಂಭವಾಗಲಿವೆ. ಪರೀಕ್ಷಾರ್ಥಿಗಳಿಗೆ ಕೊರೋನಾ ರೋಗ ಭೀತಿಯಿಲ್ಲದೇ ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಯಲು ಸಕಲ ಸಿದ್ದತೆಗಳನ್ನು ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ಸೋಮವಾರ ನಗರದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಅತ್ಯಂತ ಗುಣಮಟ್ಟ ಹಾಗೂ …
Read More »ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮಂಜೂರು
ಗೋಕಾಕ : ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮುತುವರ್ಜಿಯಿಂದಾಗಿ ತಾಲೂಕಿನ ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮಂಜೂರಾಗಿದ್ದು, ಈ ಕಟ್ಟಡ ಕಾಮಗಾರಿಗೆ 19.86 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು. ತಾಲೂಕಿನ ತಪಸಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಮಂಜೂರಾಗಿರುವ ಅಟಲ್ ಬಿಹಾರಿ …
Read More »ಬೆಳಗಾವಿ ಜಿಲ್ಲೆಯಲ್ಲಿ ಒಂದು ಕೆಸ್ ಪತ್ತೆಯಾಗಿದೆ
ರಾಜ್ಯದಲ್ಲಿ ಇಂದು 176 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇಂದು ಐವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿಗೆ 86 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ 42, ಯಾದಗಿರಿ 22, ಬೀದರ್ 20, ರಾಮನಗರ 19, ಕಲಬುರಗಿ 13, ಧಾರವಾಡ 1೦, ಕೋಲಾರ 7, ಉತ್ತರ ಕನ್ನಡ 6, ಬಳ್ಳಾರಿ 8, ದಕ್ಷಿಣ ಕನ್ನಡ 5, ಮಂಡ್ಯ …
Read More »ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊಂಡಿಯಾಗಿ ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ – ಈರಣ್ಣ ಕಡಾಡಿ
ಗೋಕಾಕ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊಂಡಿಯಾಗಿ ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ರವಿವಾರದಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗೃಹ ಕಛೇರಿ ಎನ್‌ಎಸ್‌ಎಫ್ ಅತಿಥಿ ಗೃಹಕ್ಕೆ ಭೇಟಿ ನೀಡಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು. ಮೂರು ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿರುವುದನ್ನು …
Read More »ಬೆಳಗಾವಿಯಲ್ಲಿ ಮಹಾರಾಷ್ಟ್ರದಿಂದ ಹಿಂತಿರುಗಿದ 61 ವರ್ಷದ ವ್ಯಕ್ತಿಗೆ ಸೋಂಕು
ಬೆಳಗಾವಿಯಲ್ಲಿ ಮಹಾರಾಷ್ಟ್ರದಿಂದ ಹಿಂತಿರುಗಿದ 61 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ 302ಕ್ಕೇರಿದೆ. ಇಂದು ಬೆಂಗಳೂರು ನಗರದಲ್ಲಿ 42, ಯಾದಗಿರಿಯಲ್ಲಿ 27, ಕಲಬುರಗಿಯಲ್ಲಿ 11 ಜನರಿಗೆ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 6041ಕ್ಕೇರಿದೆ.
Read More »ರಾಜ್ಯದಲ್ಲಿ ಇಂದು ಹೊಸದಾಗಿ 308 ಜನರಲ್ಲಿ ಕೊರೊನಾ ಸೋಂಕು ಪತ್ತೆ
ರಾಜ್ಯದಲ್ಲಿ ಕೊರೊನಾ ಸೋಂಕು , ಇಂದು ಒಂದೇ ದಿನದಲ್ಲಿ 308 ಜನರಲ್ಲಿ ಪತ್ತೆಯಾಗಿದೆ. ಕರ್ನಾಟಕದಲ್ಲಿ ಸೋಂಕು ಪೀಡಿತರ ಸಂಖ್ಯೆ 5760ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇಂದು ಹೊಸದಾಗಿ 308 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕಲಬುರಗಿ 99, ಯಾದಗಿರಿಯಲ್ಲಿ 14 ಮಕ್ಕಳು ಸೇರಿ 66 ಜನರಲ್ಲಿ ಸೋಂಕು ಪತ್ತೆ, ಉಡುಪಿ 45, ಗದಗ 6, ಬಳ್ಳಾರಿ 8, ಧಾರವಾಡ 4, ಬಾಗಲಕೋಟೆ 2 ಕೇಸ್ …
Read More »ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಈರಣ್ಣಾ ಕಡಾಡಿ ಅವರಿಗೆ ಟಿಕೇಟ್
ಗೋಕಾಕ : ಜಿಪಂ ಮಾಜಿ ಅಧ್ಯಕ್ಷ ಈರಣ್ಣಾ ಕಡಾಡಿ ಅವರಿಗೆ ಬಿಜೆಪಿಯು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ೪ ಸ್ಥಾನಗಳಿಗಾಗಿ ಜೂ.೧೯ ರಂದು ನಡೆಯಬೇಕಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿಯು ತನ್ನ ಎರಡು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಅದರಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಈರಣ್ಣಾ ಕಡಾಡಿ ಅವರಿಗೆ ಟಿಕೇಟ್ ನೀಡಿದ್ದು, ಇದರಿಂದ …
Read More »ಮುಗಳಖೋಡದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದ ಬಾಗಿಲು ತೆಗೆದು ಭಕ್ತರಿಗೆ ಧರುಷಣ ಭಾಗ್ಯ
ಮುಗಳಖೋಡ: ಇಡೀ ವಿಶ್ವವನ್ನೇ ತಲ್ಲಣಗೋಳಿಸಿರುವ ಮಹಾಮಾರಣಾಂತಿಕ ಕಾಯಿಲೆ ಕರೋನ ವೈರಸ್ ಇಂದು ಇಡೀ ವಿಶ್ವದಲ್ಲಿ ಹಲವಾರು ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದವು ಇದರ ಜೊತೆಯಲ್ಲಿ ಸಾಂಕ್ರಾಮಿಕ ಕಾಯಿಲೆ ಆಗಿರುವದರಿಂದ ಸರ್ಕಾರದ ನಿಯಮದಂತೆ ಧಾರ್ಮಿಕ ಸಭೆ, ಸಮಾರಂಭಗಳು ಮತ್ತು ದೇವಾಲಯಗಳ ಬಾಗಿಲುಹಾಕಿ ಧರುಷಣ ನಿರ್ಭಂದಿಸಲಾಗಿತ್ತು. ಇಂದು ಸರ್ಕಾರದ ಆದೇಶದೊಂದಿಗೆ ಮುಕ್ತಿಮಂದಿರ ಮುಗಳಖೋಡದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದ ಬಾಗಿಲು ತೆಗೆದು ಭಕ್ತರಿಗೆ ಧರುಷಣ ಭಾಗ್ಯ ಸೋಮವಾರದಿಂದ ಕಲ್ಪಿಸಲಾಗುವದು. ಮಠಕ್ಕೆ ಬರುವ ಭಕ್ತರು ಸಾಮಾಜಿಕ ಅಂತರದೊoದಿಗೆ ಮಾಸ್ಕ್ …
Read More »ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ಸೋಂಕು ಪತ್ತೆ
ಬೆಳಗಾವಿ: ಜಿಲ್ಲೆಯಲ್ಲಿ ಇಂದು ಮತ್ತೆ 38 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 301 ಕ್ಕೆ ಏರಿಕೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಜೆ ವೇಳೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಿ, 4, 5, 6 ಮತ್ತು 7 ವರ್ಷದ ಮಕ್ಕಳಿಗೂ ಸೋಂಕು ತಗುಲಿರುವುದು ದಾಖಲಾಗಿದೆ. ಸೋಂಕಿತರೆಲ್ಲರೂ ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ.
Read More »