2019-20 ನೇ ಸಾಲಿನ ವಾರ್ಷಿಕ ಮಹಾಸಭೆ ಮೂಡಲಗಿ:ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ.,ಕಲ್ಲೋಳಿ ಇದರ 2019-20 ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ ನ-28 ರಂದು ಬೆಳಿಗ್ಗೆ 10-30 ಗಂಟೆಗೆ ಸಂಘದ ಸಭಾಭವನದಲ್ಲಿ ನಡೆಯಲಿದ್ದು,ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಸಂಸ್ಥಾಪಕ ಅಧ್ಯಕ್ಷರು,ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ವಹಿಸಲಿದ್ದು ಸಹಕಾರಿಗಳು ಭಾಗವಹಿಸುವಂತೆ ಪ್ರಧಾನ ವ್ಯವಸ್ಥಾಪಕ ಹನಮಂತ ಕಲಕುಟ್ರಿ ಪ್ರಕಟಣೆಗೆ ತಿಳಿಸಿದ್ದಾರೆ.
Read More »ಮಕ್ಕಳು ಮಾನವೀಯ ಮೌಲ್ಯಗಳನ್ನು ಕಲಿಯುದರಿಂದ ಸಮಾಜ ಭದ್ರವಾಗುತ್ತದೆ -ಸುರೇಶ ಕಬ್ಬೂರ
ಮೂಡಲಗಿ:ಕಲ್ಲೋಳಿ ಪಟ್ಟಣದ ಸಾಯಿ ಸೇವಾ ಸಮಿತಿಯ ವತಿಯಿಂದ ಪ್ರಶಾಂತಿ ಕುಟೀರ ಸಭಾ ಭವನದಲ್ಲಿ ಸತ್ಯಸಾಯಿ ಬಾಬಾರವರ 95 ನೇ ಹುಟ್ಟು ಹಬ್ಬವನ್ನು ಸೋಮವಾರ ನ-23 ರಂದು ಕೇಕ ಕತ್ತರಿಸುವ ಮೂಲಕ ಬಾಲವಿಕಾಸ ಮಕ್ಕಳು ಸಂಭ್ರಮದಿಂದ ಆಚರಿಸಿದರು. ಕಲ್ಲೋಳಿ ಪಟ್ಟಣದ ಸಾಯಿ ಸೇವಾ ಸಮಿತಿಯ ಮುಖಂಡ,ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸುರೇಶ ಕಬ್ಬೂರ ಉಪನ್ಯಾಸ ನೀಡಿ,ಬಾಬಾರವರು ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 1926 ನ-23 ಈಶ್ವರಮ್ಮ,ಪೆದ್ದ ವೆಂಕಪ್ಪರಾಜು ದಂಪತಿಗಳ ಉದರದಲ್ಲಿ ಜನಿಸಿದ ಸತ್ಯಸಾಯಿ ಬಾಬಾ …
Read More »ಕೃಷಿ ಅಧಿಕಾರಿ ಎಂ.ಎಂ. ನದಾಫ್ ಪ್ರಶಂಸೆ ಕೃಷಿಯಲ್ಲಿ ಮಾದರಿಯಾಗಿರುವ ಕಲ್ಲೋಳಿಯ ಬಾಳಪ್ಪ ಬೆಳಕೂಡ
ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತರಾದ ಬಾಳಪ್ಪ ಬಸಪ್ಪ ಬೆಳಕೂಡ ಅವರು ಕಡಿಮೆ ಖರ್ಚಿನಲ್ಲಿ ಬೆಳೆದ 36 ಗಣಿಕೆಗಳು ಇರುವ ಕಬ್ಬನ್ನು ಮೂಡಲಗಿ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಎಂ.ಎಂ. ನದಾಫ್ ವೀಕ್ಷಿಸುತ್ತಿರುವುದು ಕೃಷಿ ಅಧಿಕಾರಿ ಎಂ.ಎಂ. ನದಾಫ್ ಪ್ರಶಂಸೆ ಕೃಷಿಯಲ್ಲಿ ಮಾದರಿಯಾಗಿರುವ ಕಲ್ಲೋಳಿಯ ಬಾಳಪ್ಪ ಬೆಳಕೂಡ ಮೂಡಲಗಿ: ಕಲ್ಲೋಳಿಯ ಪ್ರಗತಿಪರ ರೈತರಾದ ಬಾಳಪ್ಪ ಬಿ. ಬೆಳಕೂಡ ಅವರು ಕಡಿಮೆ ಖರ್ಚಿನಲ್ಲಿ ಅಧಿಕ ಕಬ್ಬು, ಅರಿಸಿನ ಮತ್ತು ಸೋಯಾಬಿನ್ ಬೆಳೆದಿರುವುದು …
Read More »ಜಿಲ್ಲಾಧ್ಯಕ್ಷರಾಗಿ ಮಲ್ಲಪ್ಪ ಕಡಾಡಿ ಆಯ್ಕೆ
ಜಿಲ್ಲಾಧ್ಯಕ್ಷರಾಗಿ ಮಲ್ಲಪ್ಪ ಕಡಾಡಿ ಆಯ್ಕೆ ಮೂಡಲಗಿ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯ ಪಂಚಮಸಾಲಿನ ಸಂಘದ ಬೆಳಗಾವಿಯ ಜಿಲ್ಲಾಧ್ಯಕ್ಷರನ್ನಗಿ ತಾಲ್ಲೂಕಿನ ಕಲ್ಲೋಳಿಯ ಮಲ್ಲಪ್ಪ ಕೆಂಚಪ್ಪ ಕಡಾಡಿ ಅವರು ನೇಮಕರಾಗಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಬಿ. ನಾಗನಗೌಡ್ರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ಧೇಶ ಹನಸಿ ಅವರು ಕಡಾಡಿ ಅವರ ಸಂಘಟನೆ ಮತ್ತು ಕ್ರೀಯಾಶೀಲತೆಯನ್ನು ಪರಿಗಣಿಸಿ ಅವರ ನೇಮಕ ಮಾಡಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.
Read More »ಹಳ್ಳೂರ ಗ್ರಾಪಂ ಸಭಾ ಭವನದಲ್ಲಿ ಆಯೋಜಿಸಲಾದ ಕೇಂದ್ರ-ರಾಜ್ಯ ಸರಕಾರಗಳ ಜನ ವಿರೋಧಿ ನೀತಿ ಪತ್ರಿಭಟಿಸಿ ನ.26ರಂದು ಅಖಿಲ ಭಾರತ ಮುಷ್ಕರ ಕುರಿತು ಪೂರ್ವಭಾವಿ ಸಭೆ
ಮೂಡಲಗಿ : ಎರಡನೇ ಅವಧಿಗೆ ಕೇಂದ್ರದ ಚುಕ್ಕಾಣಿ ಹಿಡಿದು ಬಿಜೆಪಿ ಸರಕಾರವು ದೇಶಕ್ಕೆ ಅನ್ನ ಹಾಕುವ ರೈತ, ಸಂಪತ್ತು ಸೃಷ್ಟಿ ಮಾಡುವ ಕಾರ್ಮಿಕರನ್ನು ಕಡೆಗಣಿಸಿದೆ ಎಂದು ಗ್ರಾಪಂ ನೌಕರರ ಸಂಘದ ಸದಸ್ಯರಾದ ಕಿಶೋರ ಗಣಾಚಾರಿ ಹೇಳಿದರು ಸಮೀಪದ ಹಳ್ಳೂರ ಗ್ರಾಪಂ ಸಭಾ ಭವನದಲ್ಲಿ ಆಯೋಜಿಸಲಾದ ಕೇಂದ್ರ-ರಾಜ್ಯ ಸರಕಾರಗಳ ಜನ ವಿರೋಧಿ ನೀತಿ ಪತ್ರಿಭಟಿಸಿ ನ.26ರಂದು ಅಖಿಲ ಭಾರತ ಮುಷ್ಕರ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ. ರೈತರ ಬೆಳೆಗಳಿಗೆ ಬೆಲೆ ಇಲ್ಲದೇ …
Read More »ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಇಂದು ರಸ್ತೆ ಸಂಚಾರ ಸರಕ್ಷಾ ಅಭಿಯಾನ
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಇಂದು ರಸ್ತೆ ಸಂಚಾರ ಸರಕ್ಷಾ ಅಭಿಯಾನ ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಪೊಲೀಸ್ ಇಲಾಖೆಯೊಂದಿಗೆ ನಾಳೆ ನ. 24ರಂದು ರಸ್ತೆ ಸಂಚಾರ ಸುರಕ್ಷಾ ಅಭಿಯಾನವನ್ನು ಏರ್ಪಡಿಸಿರುವರು. ನ. 24ರಂದು ಬೆಳಿಗ್ಗೆ 10ಕ್ಕೆ ಕಲ್ಮೇಶ್ವರ ವೃತ್ತದಲ್ಲಿ ಸಿಪಿಐ ವೆಂಕಟೇಶ ಮುರನಾಳ ಅಭಿಯಾನಕ್ಕೆ ಚಾಲನೆ ನೀಡುವರು. ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ಲಯನ್ಸ್ ಕ್ಲಬ್ ಅಧ್ಯಕ್ಷ ಪುಲಕೇಶ ಸೋನವಾಲಕರ ಹಾಗೂ ಲಯನ್ಸ್ ಕ್ಲಬ್ ಪರಿವಾರದ …
Read More »ಮಹಾದ್ವಾರ ಉದ್ಘಾಟಿಸಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನೂತವಾಗಿ ನಿರ್ಮಿಸಲಾದ ಶಿವನ ಮೂರ್ತಿಯನ್ನು ಲೋಕಾರ್ಪಣೆ ಮಾಡಿ, ಶಿವನ ಮೂರ್ತಿಗೆ ಪೂಜೆ
ಮೂಡಲಗಿ : ಸಮೀಪದ ಹಳ್ಳೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ನೂತನ ಮಹಾದ್ವಾರ ಉದ್ಘಾಟನೆ ನಿಮಿತ್ಯವಾಗಿ ಮಹಾಲಕ್ಷ್ಮೀ ದೇವಸ್ಥಾನದಿಂದ ಕುಂಭಮೇಳದೊಂದಿಗೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಮೆರವಣಿಗೆ ಗ್ರಾಮದ ಪ್ರಮುಖ ಓಣಿಯಲ್ಲಿ ಜರುಗಿತು. ನಂತರ ಶ್ರೀಗಳು ಮಹಾದ್ವಾರ ಉದ್ಘಾಟಿಸಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನೂತವಾಗಿ ನಿರ್ಮಿಸಲಾದ ಶಿವನ ಮೂರ್ತಿಯನ್ನು ಲೋಕಾರ್ಪಣೆ ಮಾಡಿ, ಶಿವನ ಮೂರ್ತಿಗೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮದ ಸಾನಿಧ್ಯವಹಿಸಿದ ಶ್ರೀಗಳು ಮಾತನಾಡಿ, ಕಾಣದೇ ಇರುವ ದೇವರು ಇಲ್ಲ …
Read More »ಡಾ.ಬಿ.ಆರ್. ಅಂಬೇಡ್ಕರ ಬಾಲಕೀಯರ ವಸತಿ ಶಾಲೆಗೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ
ಶಿಕ್ಷಣದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅರಭಾವಿಯಲ್ಲಿ 20.50 ಕೋಟಿ ರೂ. ವೆಚ್ಚದ ಡಾ.ಬಿ.ಆರ್. ಅಂಬೇಡ್ಕರ ಬಾಲಕೀಯರ ವಸತಿ ಶಾಲೆಗೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ಧೇಶದಿಂದ ಅಖಂಡ ಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೆ 15 ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದು, ಇದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಪೂರಕವಾಗಲಿದೆ ಎಂದು ಕೆಎಂಎಫ್ …
Read More »ಅರುಣ ಸವತಿಕಾಯಿಯವರಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ
ಸವತಿಕಾಯಿ ಅವರಿಗೆ ಪಿಎಚ್‍ಡಿ ಪದವಿ ಮೂಡಲಗಿ : ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಬೇಟಗೇರಿ ಗ್ರಾಮದ ಮಾಜಿ ಜಿಪಂ ಸದಸ್ಯ ವಾಸುದೇವ ಸವತಿಕಾಯಿಯವರ ಹಿರಿಯ ಪುತ್ರ ಅರುಣ ಸವತಿಕಾಯಿಯವರಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಕಾಶ ಎಸ್ ಕಟ್ಟಿಮನಿ ಅವರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ರಾಜಕೀಯ ನಾಯಕತ್ವ, ಬಿ.ಎಸ್. ಯಡಿಯೂರಪ್ಪ ಅವರ ಒಂದು ಅಧ್ಯಯನ ಎಂಬ ಸಂಶೋಧನಾ ಮಹಾಪ್ರಬಂದವನ್ನು ಮಂಡಿಸಿದಕ್ಕೆ ರಾಣಿ …
Read More »ನ.23ರಂದು ದ್ವಾರಬಾಗಿಲು ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ
ನ.23ರಂದು ದ್ವಾರಬಾಗಿಲು ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮೂಡಲಗಿ: ಸಮೀಪದ ಹಳ್ಳೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ನೂತವಾಗಿ ನಿರ್ಮಿಸಲಾದ ದ್ವಾರಬಾಗಿಲು ಉದ್ಘಾಟನೆ ಹಾಗೂ ಶ್ರೀ ಪರಮೇಶ್ವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ನ.23ರಂದು ಜರುಗಲಿದೆ. ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸುವವರು ಮತ್ತು ಗ್ರಾಮ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಮತ್ತು ಬೇರೆ ಬೇರೆ ಹಳ್ಳಿಗಳಿಂದ ಭಕ್ತಾದಿಗಳು ಕಾರ್ಯಕ್ರಮದಲ್ಲಿ …
Read More »