inmudalgi
ಜುಲೈ 8, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ : ಕುಲಗೋಡದಿಂದ ಯಾದವಾಡವರೆಗಿನ ರಸ್ತೆ ಸುಧಾರಣೆಗೆ 14 ಕೋಟಿ ರೂ. ಅನುದಾನ ಮಂಜೂರಾತಿಗಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆಂದು ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ ಹೇಳಿದರು. ಬುಧವಾರದಂದು ಲೋಕೋಪಯೋಗಿ ಇಲಾಖೆಯ ಸಂಕೇಶ್ವರ-ಸಂಗಮ ರಾ.ಹೆ-44 ರ ಕುಲಗೋಡ-ಯಾದವಾಡ ರಸ್ತೆ ಸುಧಾರಣಾ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತುರ್ತಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರು, ಅಧಿಕಾರಿಗಳಿಗೆ ಶಾಸಕರು …
Read More »
inmudalgi
ಜುಲೈ 7, 2020 ತಾಲ್ಲೂಕು, ಬೆಳಗಾವಿ
ರಾಜ್ಯದಲ್ಲಿ ಇಂದು 1498 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಬೆಂಗಳೂರಲ್ಲಿ 800, ಬೆಳಗಾವಿಯಲ್ಲಿ 20, ಜನರಲ್ಲಿ ಸೋಂಕು ದೃಢಪಟ್ಟಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದು, ಗೋಕಾಕ ತಾಲೂಕಿನ ಕೊಣ್ಣುರು ಪಟ್ಟಣದ 55 ವರ್ಷದ ಮಹಿಳೆಯೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 414 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ 7 ಕ್ಕೆ ಏರಿದೆ. …
Read More »
inmudalgi
ಜುಲೈ 6, 2020 ತಾಲ್ಲೂಕು, ಬೆಳಗಾವಿ
ಗೋಕಾಕ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2ನೇ ಅವಧಿಯ ಒಂದು ವರ್ಷ ಪೂರ್ಣಗೊಂಡಿದ್ದು, ವಿಶ್ವದಲ್ಲಿಯೇ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ದೂರದೃಷ್ಠಿ ನಾಯಕತ್ವವೇ ಕಾರಣವೆಂದು ಅರಭಾಂವಿ ಶಾಸಕ ಮತ್ತು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸೋಮವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಬಿಜೆಪಿ ಅರಭಾಂವಿ ಮಂಡಲ ಹಮ್ಮಿಕೊಂಡಿದ್ದ ಕರ್ನಾಟಕ ಜನಸಂವಾದ ಸಮಾರೋಪ ಸಮಾರಂಭದ ನಿಮಿತ್ಯ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಪರೆನ್ಸ್ …
Read More »
inmudalgi
ಜುಲೈ 5, 2020 ತಾಲ್ಲೂಕು, ಬೆಳಗಾವಿ
ರಾಜ್ಯದಲ್ಲಿ ಇಂದು 1925 ಜನರಿಗೆ ಸೋಂಕು ತಗುಲಿದೆ . ಬೆಳಗಾವಿ ಜಿಲ್ಲೆಯಲ್ಲಿ ಇಂದು 11 ಪ್ರಕರಣಗಳು ಪತ್ತೆಯಾಗಿವೆ. 9 ಹೊಸ ಪ್ರಕರಣ ಇಂದು ದಾಖಲಾದರೆ, ನಿನ್ನೆ ಇಬ್ಬರು ಸಾವನ್ನಪ್ಪಿದ್ದಾರೆ. ಅದನ್ನು ಆರೋಗ್ಯ ಇಲಾಖೆ ಇಂದು ಅಧಿಕೃತ ಘೋಷಣೆ ಮಾಡಿದೆ. ಇದುವರೆಗೆ ಕಂಡು ಪತ್ತೆಯಾಗಿರುವ ಸೋಂಕಿತರ ಸಂಖ್ಯೆ 394ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕೊರೋನಾ ಗೆ ಒಟ್ಟು 6 ಜನ ಬಲಿಯಾಗಿದ್ದಾರೆ. ಅಥಣಿ-5, ಬೆಳಗಾವಿ ನಗರ-3, ಸವದತ್ತಿ (ಉಗರಗೋಳ)-1 ಜಿಲ್ಲೆಯಲ್ಲಿ ಮತ್ತೆರಡು ಸಾವು. ರಾಯಬಾಗ-1 ಬೆಳಗಾವಿ …
Read More »
inmudalgi
ಜುಲೈ 4, 2020 ತಾಲ್ಲೂಕು, ಬೆಳಗಾವಿ
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಕರ್ಮಕಾಂಡ ಮುಂದುವರೆದಿದೆ,ಜಿಲ್ಲೆಯ ಜನ ಸಂಡೇ ಲಾಕಡೌನ್ ಮೂಡ್ ನಲ್ಲಿ ಇರುವಾಗಲೇ ಈ ಮಹಾಮಾರಿ ಹೊಡೀ ಒಂಬತ್ತ್ ಎಂದಿದೆ,ಯಾಕಂದ್ರೆ ಇವತ್ತು ಒಂದೇ ದಿನ 27 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಶನಿವಾರದ ಹೆಲ್ತ್ ಬುಲೀಟೀನ್ ಬಿಡುಗಡೆಯಾಗಿದ್ದು,ಈ ಬುಲೀಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 27 ಜನರಿಗೆ ಸೊಂಕು ಇರುವದು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ರಾಜ್ಯ ಹೆಲ್ತ್ ಬುಲೀಟೀನ್ ಪ್ರಕಾರ 383 ಕ್ಕೇರಿದಂತಾಗಿದೆ. ಇಂದು ರಾಜ್ಯದಲ್ಲಿ …
Read More »
inmudalgi
ಜುಲೈ 3, 2020 ತಾಲ್ಲೂಕು, ಬೆಳಗಾವಿ
ಹಳ್ಳೂರ: ಗ್ರಾಮದ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಪತ್ರಿಕಾ ದಿನಾಚರಣೆ ನಿಮಿತ್ಯ ಪತ್ರಕರ್ತರಿಗೆ ಸತ್ಕಾರ ಸಮಾರಂಭವು ನಡೆಯಲಿದೆ. ಗೋಕಾಕ ಹಾಗೂ ಮೂಡಲಗಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ್ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷೆ ಕಲಾವತಿ ಮಿರ್ಜಿ ಅಧ್ಯಕ್ಷತೆಯನ್ನು ವಹಿಸುವರು. ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹಾಗೂ ಮೂಡಲಗಿ ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪ್ರಾಚಾರ್ಯ ಹಾಗೂ ಸಾಹಿತಿ …
Read More »
inmudalgi
ಜುಲೈ 3, 2020 ತಾಲ್ಲೂಕು, ಬೆಳಗಾವಿ
ಗೋಕಾಕ : ವಿಶ್ವ ವ್ಯಾಪಿಯಾಗಿ ದಿನದಿಂದ ದಿನಕ್ಕೆ ಹರಡುತ್ತಿರುವ ಕೊರೋನಾ ವೈರಸ್ ಕೌಜಲಗಿಯ ಮಿರಾಳ ತೋಟಕ್ಕೂ ಪ್ರವೇಶಿಸಿದ್ದು, ಸಾರ್ವಜನಿಕರು ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನ ನೀಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು. ಶುಕ್ರವಾರದಂದು ತಾಲ್ಲೂಕಿನ ಕೌಜಲಗಿ ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ಶಾಸಕ ಮತ್ತು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ನಡೆಸಿದ ಮುಂಜಾಗ್ರತಾ ಸಭೆಯಲ್ಲಿ ಗ್ರಾಮಸ್ಥರನ್ನುದ್ಧೇಶಿಸಿ ಅವರು ಮಾತನಾಡಿದರು. ಕೌಜಲಗಿ ಗ್ರಾಮದಿಂದ …
Read More »
inmudalgi
ಜುಲೈ 3, 2020 ತಾಲ್ಲೂಕು, ಬೆಳಗಾವಿ
ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಅರ್ಭಟ ಮುಂದುವರೆದಿದ್ದು ಇಂದು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 13 ಜನರಿಗೆ ಕೊರೊನಾ ಸೊಂಕು ತಗುಲಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದ ಎರಡು ಕುಟುಂಬದ 8 ಸದಸ್ಯರಿಗೆ ಕೊರೊನಾ ಸೊಂಕು ತಗುಲಿದೆ. ಅದಲ್ಲದೇ ಕಳೆದ ಮೂರು ದಿನಗಳ ಹಿಂದೆ ಕಳ್ಳತನ ಆರೋಪದ ಮೇಲೆ ಬಂಧಿತನಾದ ಆರೋಪಿಗೂ ಕೊರೊನಾ ಸೊಂಕು ತಗುಲಿದೆ. ಇದರಿಂದ ಬೆಳಗಾವಿ ನಗರದ ಕ್ಯಾಂಪ ಪೋಲಿಸ್ ಠಾಣೆಯ ಸಿಬ್ಬಂದಿ ಯಲ್ಲಿ ದುಗುಡಿನ ವಾತಾವರಣ …
Read More »
inmudalgi
ಜುಲೈ 3, 2020 ತಾಲ್ಲೂಕು, ಬೆಳಗಾವಿ
ಮೂಡಲಗಿಯ ತಾಲ್ಲೂಕು ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಆಚರಿಸಿದ ವೈದ್ಯರ ದಿನಾಚರಣೆಯಲ್ಲಿ ವೈದ್ಯರನ್ನು ಸನ್ಮಾನಿಸಿ ಗೌರವಿಸಿದರು ಸಾಹಿತಿ ಬಾಲಶೇಖರ ಬಂದಿ ಅಭಿಮತ ‘ವೈದ್ಯರು ಭೂಮಿಯ ಮೇಲಿನ ದೇವರ ಸ್ವರೂಪಿಗಳು’ ಮೂಡಲಗಿ: ‘ವೈದ್ಯರಿಲ್ಲದ ಜಗತ್ತನ್ನು ಊಹಿಸಲಿಕ್ಕೆ ಸಾಧ್ಯವಿಲ್ಲ, ವೈದ್ಯರು ಭೂಮಿಯ ಮೇಲೆ ದೇವರ ಸ್ವರೂಪಿಯಾಗಿ ಕಾರ್ಯಮಾಡುತ್ತಾರೆ’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು. ಇಲ್ಲಿಯ ತಾಲ್ಲೂಕು ಪ್ರೆಸ್ ಕ್ಲಬ್‍ದಲ್ಲಿ ಆಚರಿಸಿದ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದ ಅವರು ಸಮಾಜಕ್ಕೆ ವೈದ್ಯರು ನೀಡಿದ ಕೊಡುಗೆ, ಸಾಧನೆ …
Read More »
inmudalgi
ಜುಲೈ 3, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ರಾಜ್ಯಸಭಾ ನೂತನ ಸದಸ್ಯ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯವನ್ನು ಶುಕ್ರವಾರ ರೈತರು, ಯೋಧರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಮೂಡಲಗಿ: ‘ರಾಜ್ಯಸಭಾ ಸದಸ್ಯತ್ವದ ಅವಧಿಯನ್ನು ಜನರ ಸೇವೆಗಾಗಿ ಪ್ರಾಮಾಣಿಕವಾಗಿ ಸದ್ವಿನಿಯೋಗಿಸಿಕೊಳ್ಳುವೆನು’ ಎಂದು ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಹೇಳಿದರು. ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾಗಿರುವ ಈರಣ್ಣ ಕಡಾಡಿ ಅವರು ಕಲ್ಲೋಳಿಯಲ್ಲಿ ಶ್ರೀ ಮಹಾಲಕ್ಷ್ಮೀ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಕಟ್ಟಡದಲ್ಲಿ ಸ್ಥಾಪಿಸಿರುವ ಜನಸಂಪರ್ಕ ಕಚೇರಿಯ …
Read More »