Breaking News
Home / Recent Posts / ರಾಜ್ಯೋತ್ಸವ ಪ್ರಯುಕ್ತ ಅನ್ಯ ಭಾಷೆಯನ್ನು ಬಳಸದೇ ಕನ್ನಡದಲ್ಲಿ ನಾಲ್ಕು ನಿಮೀಷ ಮಾತನಾಡುವ ಸ್ವರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡ ಸ್ಪರ್ಧಾಳುಗಳಿಗೆ ಗೌರವ ಧನ ಹಾಗೂ ಪ್ರಮಾಣ ಪತ್ರ

ರಾಜ್ಯೋತ್ಸವ ಪ್ರಯುಕ್ತ ಅನ್ಯ ಭಾಷೆಯನ್ನು ಬಳಸದೇ ಕನ್ನಡದಲ್ಲಿ ನಾಲ್ಕು ನಿಮೀಷ ಮಾತನಾಡುವ ಸ್ವರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡ ಸ್ಪರ್ಧಾಳುಗಳಿಗೆ ಗೌರವ ಧನ ಹಾಗೂ ಪ್ರಮಾಣ ಪತ್ರ

Spread the love

ಮೂಡಲಗಿ : ಸರ್ಕಾರ ಆದೇಶದ ಅನ್ವಯ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಅ.28ರಂದು ಮುಂಜಾನೆ 11 ಗಂಟೆಗೆ ಇಡೀ ರಾಜ್ಯಾದಾದ್ಯಂತ ಏಕ ಕಾಲಕ್ಕೆ “ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೇ ಕನ್ನಡ ನಾಡಿನಲ್ಲೇ ಹುಟ್ಟಬೇಕು” ಈ ಗೀತೆಗಳನ್ನು ಏಕ ಕಾಲಕ್ಕೆ ಹಾಡಲು ಪಟ್ಟಣದ ಎಸ್.ಎಸ್.ಆರ್ ಕಾಲೇಜ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಹಾಗೂ ತಾಲೂಕಿನ ಪತ್ರಿಯೊಂದು ಗ್ರಾಮದಲ್ಲಿ ಈ ಕಾರ್ಯಾಕ್ರಮವನ್ನು ನೇರವೇರಿಸಲು ಗ್ರಾಪಂ ಪಿಡಿಓ ಹಾಗೂ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ ಡಿ ಜಿ ಮಹಾತ್ ತಿಳಿಸಿದ್ದಾರೆ. .

ಪಟ್ಟಣದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಸರಿಯಾಗಿ 10: 30ಕ್ಕೆ ಕಾಲೇಜು ಆವರಣದಲ್ಲಿ ಸೇರಬೇಕೆಂದು ಹಾಗೂ ಗೀತೆಗಳನ್ನು ಪ್ರಸ್ತುತ ಪಡಿಸಿದ ನಂತರ ಸರ್ಕಾರ ಆದೇಶದಂತೆ ಅನ್ಯ ಭಾಷೆಯನ್ನು ಬಳಸದೇ ಕನ್ನಡದಲ್ಲಿ ನಾಲ್ಕು ನಿಮೀಷ ಮಾತನಾಡುವ ಸ್ವರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡ ಸ್ಪರ್ಧಾಳುಗಳಿಗೆ ಗೌರವ ಧನ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಹಾಗೂ ಸ್ಪರ್ಧೆಗೆ ತಾಲೂಕಿನ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸ್ಪರ್ಧೆಗೆ ಹೆಸರು ನೊಂದಾಯಿಸಲು ಬಿಇಓ ಕಾರ್ಯಾಲಯದಲ್ಲಿ ನೊಂದಾಯಿಸಿ, ಇಲ್ಲವಾದರೇ ಕಾರ್ಯಕ್ರಮದ ಸ್ಥಳದಲ್ಲಿ ನೊಂದಾಯಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಹಶೀಲ್ದಾರ ಡಿ ಜಿ ಮಹಾತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ