ಮೂಡಲಗಿ: ಸರ್ಕಾರದ ನಿರ್ದೇಶನದಂತೆ ನಮ್ಮ ಧಾರ್ಮಿಕ ಹಾಗೂ ಸಾಂಸ್ಕøತಿಕ ಪರಂಪರೆಯನ್ನು ಮುಂದುನರೆಸಿಕೊಂಡು ಹೋಗುವುದಕ್ಕೆ ಹಾಗೂ ಗೋವುಗಳ ಮಹತ್ವ ಮತ್ತು ಅವುಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಂತೆ ಗೋಮಾತೆಯನ್ನು ಪೂಜಿಸುವ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ತಹಸೀಲ್ದಾರ ಡಿ ಜಿ ಮಹಾತ ಹೇಳಿದರು.
ಶುಕ್ರವಾರ ಪಟ್ಟಣದ ಲಕ್ಷ್ಮೀ ನಗರ ವಾರ್ಡ ನಂ 5ರಲ್ಲಿನ ಶ್ರೀ ಕರೆಮ್ಮ ದೇವಿ ಹಾಗೂ ಹನುಮಂತ ದೇವರ ದೇವಸ್ಥಾನ ಆವರಣದಲ್ಲಿ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಧೇನುವಾದ ಗೋವುಗಳನ್ನು ಉಳಿಸಿ ಬೆಳೆಸುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಬಿಇಓ ಅಜೀತ ಮನ್ನಿಕೇರಿ ಮಾತನಾಡಿ, ರೈತರ ಜೀವನಾಧಾರವಾಗಿರುವ ಗೋವುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಬಲಿಪಾಡ್ಯಮಿ ದಿನದಂದು ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಗೋವುಗಳಿಗೆ ಪೂಜಿ ಸಲ್ಲಿಸಿ ಜನಜಾಗೃತಿ ಮೂಡಿಸುವ ಸರ್ಕಾದರ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದರು.
ವಾರ್ಡ ಸದಸ್ಯೆ ಖುರ್ಶಾದ ಅನ್ವರ ನದಾಫ್ ಗೋಪೂಜೆ ನೆರವೇರಿಸಿದರು ಮಹಿಳೆಯರು ಆರತಿ ಬೆಳಗಿದರು.
ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗುಳಖೋಡ, ಮುಖಂಡರಾದ ಅನ್ವರ ನದಾಫ್, ಮಹಿರಾಜಬಿ ನದಾಫ್, ಅಶ್ವಿನಿ ಗುರ್ಲಾಪೂರ, ಮತ್ತಪ್ಪ ಹುಡೇದ, ಶಿಕ್ಷಕ ಬಸವರಾಜ ಸಸಾಲಟ್ಟಿ, ಮಹಾದೇವ ಹಿರೇಮಠ ಸೇರಿದಂತೆ ಅನೇಕ ಮಹಿಳೆಯರು, ಗಣ್ಯರು ಇದ್ದರು.
