ಇಂದು ಬೆಳದಿಂಗಳ ಸಾಹಿತ್ಯ ಚಿಂತನ: ಕುವೆಂಪು ಸಾಹಿತ್ಯ
ಮೂಡಲಗಿ: ಇಲ್ಲಿಯ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದಿಂದ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮದ ತಿಂಗಳ ಉಪನ್ಯಾಸ ಸಂಚಿಕೆ 1 ಜ. 17ರಂದು ಸಂಜೆ 6.30ಕ್ಕೆ ಶ್ರೀರಂಗ ಸಾಂಸ್ಕøತಿಕ ಭವನದಲ್ಲಿ ಜರುಗಲಿದೆ.
‘ಕುವೆಂಪು ವಿಶ್ವಮಾನವ ಸಂದೇಶ ಮತ್ತು ವೈಚಾರಿಕತೆ’ ಕುರಿತು ಡಾ. ಮಹಾದೇವ ಜಿಡ್ಡಿಮನಿ ಉಪನ್ಯಾಸ ನೀಡುವರು. ಅಧ್ಯಕ್ಷತೆಯನ್ನು ಬಾಲಶೇಖರ ಬಂದಿವಹಿಸುವರು. ಸಾಹಿತ್ಯಾಸಕ್ತರು ಭಾಗವಹಿಸಬೇಕು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಹಾಗೂ ಗೌರವ ಕಾರ್ಯದರ್ಶಿ ಎ.ಎಚ್. ಒಂಟಗೋಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.