Breaking News
Home / Recent Posts / ಎಲ್ಲರೊಂದಿಗೆ ಬೆರೆಯುವ ಅಜಾತಶತ್ರು ಉಮೇಶ ಕತ್ತ

ಎಲ್ಲರೊಂದಿಗೆ ಬೆರೆಯುವ ಅಜಾತಶತ್ರು ಉಮೇಶ ಕತ್ತ

Spread the love

 

ಮೂಡಲಗಿ: ಸಚಿವ ಉಮೇಶ ಕತ್ತಿ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮೂಡಲಗಿ ಘಟಕದಿಂದ ಶ್ರದ್ಧಾಂಜಲಿಯನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ನುಡಿ ನಮನ ಸಲ್ಲಿಸಿದ ಬಾಲಶೇಖರ ಬಂದಿ ಹಾಗೂ ಎ.ಜಿ. ಶರಣಾರ್ಥಿ ಮಾತನಾಡಿ ‘ಉಮೇಶ ಕತ್ತಿ ಅವರು ಅಪ್ರತಿಮ ರಾಜಕಾರಣಿಯಾಗಿದ್ದರು. ಜನಪರ ಕಾರ್ಯಗಳನ್ನು ಮಾಡುವ ಮೂಲಕ ನಾಡಿನ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ’ ಎಂದರು.
‘ಎಲ್ಲರೊಂದಿಗೆ ಬೆರೆಯುವ ಅಜಾತಶತ್ರುವಾಗಿದ್ದ ಅವರ ನಿಧನದಿಂದ ಸಮಾಜಕ್ಕೆ ಹಾಗೂ ನಾಡಿಗೆ ತುಂಬಲಾರದಷ್ಟು ಆಘಾತವಾಗಿದೆ’ ಎಂದರು.
ಸಂಘದ ಅಧ್ಯಕ್ಷ ಶಿವಪ್ಪ ಭುಜನ್ನವರ ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ಪುಷ್ಟ ಅರ್ಪಿಸಿ ಸಮಾಜದ ಪರವಾಗಿ ನಮನಗಳನ್ನು ಸಲ್ಲಿಸಿದರು.
ಚನ್ನವೀರಪ್ಪ ಅಂಗಡಿ, ಈಶ್ವರ ಗೊಲಶೆಟ್ಟಿ, ಸಂತೋಷ ಅಂಗಡಿ, ವೀರೇಶ ದುಗ್ಗಾಣಿ, ಮುರುಘೇಂದ್ರ ಜಕಾತಿ, ಸಬರದ ಮಹಾದೇವ ಜಕಾತಿ, ಸಿದ್ದು ಕೊಟಗಿ, ಪ್ರಕಾಶ ಶೀಲವಂತ, ಶಿವಬಸು ನೀಲನ್ನವರ, ಬಸವಣ್ಣೆಪ್ಪ ಜಕಾತಿ, ಶಂಕರ ತಾಂವಶಿ, ಬಶೆಟಪ್ಪ ಗಾಡವಿ, ಲಿಂಗಪ್ಪ ಗಾಡವಿ, ಸೋಮೇಶ್ವರ ಅಂಗಡಿ ಇದ್ದರು.


Spread the love

About inmudalgi

Check Also

4 ಕೋಟಿ ರೂಪಾಯಿ ಮೊತ್ತದ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿದ- ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love ಗೋಕಾಕ- ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಕಳೆದ 30 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ