ಜಾನಪದ ಗಾಯಕ ಮಾಳು ನಿಪನಾಳ ಅವರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ
ಮೂಡಲಗಿ : ಸಮೀಪದ ನಿಪನಾಳ ಗ್ರಾಮದ ಜಾನಪದ ಗಾಯಕ ಮಾಳು ಅವರು ಕಳೆದ 15 ವರ್ಷಗಳಿಂದ ಡೊಳ್ಳಿನ ಹಾಡಿನ ಮೂಲಕ ಜಾನಪದ ಲೋಕಕ್ಕೆ ಬಂಧು ಜಾನಪದ ಮತ್ತು ಸಾಹಿತ್ಯ ಕ್ಷೆತ್ರದಲ್ಲಿ ತನ್ನದೆಯಾದ ಸಾಧನೆ ಮಾಡುತ್ತ ಬಂದಿರುತ್ತಾನೆ. ಜನಪದ ಕವನಗಳು, ಜಾನಪದ ಕಲೆ, ಸಂಸ್ಕೃತಿಕ ಹಾಡು ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಸಾಧನೆ ಮಾಡುತ್ತಾ ಬಹುಮಾನಗಳನ್ನು ಪಡೆದಿರುತ್ತಾರೆ ಇವರ ಜಾನಪದ ಮತ್ತು ಸಾಹಿತ್ಯ ಕ್ಷೆತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಇವರ ವತಿಯಿಂದ ಕೊಡಮಾಡುವ 2025 ನೇ ಸಾಲಿನ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಸಿಂಗರ್ ಮಾಳು ನಿಪನಾಳ ಅವರಿಗೆ ಲಭಿಸಿದೆ.
ಅವರಿಗೆ ಉದಗಟ್ಟಿಯ ಶ್ರೀ ಉದ್ದಮ್ಮದೇವಿ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಏರ್ಪಡಿಸಿದ ಜಾನಪದ ಹಾಸ್ಯ ರಸಮಂಜರಿ ಕಾರ್ಯಕ್ರಮದಲ್ಲಿ ಬಬಲಾದಿಯ ಮೂಲ ಸಂಸ್ಥಾನ ಮಠದ ಪೂಜ್ಯಶ್ರೀ ಸಿದ್ದರಾಮಯ್ಯ ಅಜ್ಜನವರು, ಸದಲಗಾ ಪೂಜ್ಯಶ್ರೀ ಧರಿಕಾನ್ ಮುತ್ಯಾ, ಕುಂಚನೂರದ ಗಜಾನಂದ ಮುತ್ಯಾ, ರೈತ ಸಂಘದ ಅಧ್ಯಕ್ಷರಾದ ಮಹಾದೇವ ಗೋಡೆರ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ ಅವರು ಮಾಳು ನಿಪನಾಳ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ವೇದಿಕೆ ಮೇಲೆ ರೈತ ಸಂಘದ ಅಧ್ಯಕ್ಷರಾದ ಗಣಪತಿ ಇಳಿಗೇರ್, ಪರಸಪ್ಪ ಕುರಿ, ಸದಾಶಿವ ದುರದುಂಡಿ, ರಾಘವೇಂದ್ರ ದೊಡವಾಡ, ಲಕ್ಕಪ್ಪ ದುರದುಂಡಿ, ಹೊಳೆಪ್ಪ ಉದ್ಯಾಗೋಳ, ಮಹಾದೇವ ದುರದುಂಡಿ ಹಾಗೂ ಯುವ ಸಂಘದ ಪದಾಧಿಕಾರಿಗಳು, ಗಣ್ಯರು, ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.
ಸ್ಟಾರ್ ನಿರೂಪಕ ಸೋಮು ಮೆಕಳಿ ಸ್ವಾಗತಿಸಿ ನಿರೂಪಿಸಿದರು. ನಿಪನಾಳ ಸೋಮು ವಂದಿಸಿದರು.