ಮೂಡಲಗಿ: ರಾಜ್ಯದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಿ, ಅಭಿವೃದ್ಧಿ ಪರ ಕಾರ್ಯ ಕೈಗೊಳ್ಳುತ್ತೇನೆ ಎಂದು ನೂತನ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ನವದೆಹಲಿ ಸಂಸತ್ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣಕ್ಕೆ ರವಿವಾರ ಜು.26ರಂದು ಪ್ರಥಮ ಭಾರಿಗೆ ಆಗಮಿಸಿದ ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸ್ಥಳೀಯ ನಂದೇಶ್ವರ ಸಹಕಾರಿ, ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಡಳಿತ ಮಂಡಳಿಯವರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಸಹಕಾರಿ ಧುರೀಣರಾದ ರಾಜಪ್ಪ ಗೋಸಬಾಳ, ಪರಪ್ಪ ಮಳವಾಡ, ರಾವಸಾಹೇಬ ಬೆಳಕೂಡ, ಮಹಾದೇವ ಮದಭಾವಿ, ಬಸವರಾಜ ಕಂಕಣವಾಡಿ, ಸಿದ್ದಪ್ಪ ಮುಗಳಿ, ಭೀಮಶಿ ಹೆಬ್ಬಾಳ, ಹನುಮಂತ ಕಲಕುಟ್ರಿ, ಪರಪ್ಪ ಗಿರೆಣ್ಣವರ, ಶಂಕರ ಕೌಜಲಗಿ, ಶಿವಾನಂದ ಬಡಿಗೇರ, ದೊಡ್ಡಪ್ಪ ಉಜ್ಜಿನಕೊಪ್ಪ, ಮಹಾಲಕ್ಷ್ಮೀ ಮತ್ತು ನಂದೇಶ್ವರ ಸೌಹಾರ್ದ ಸಹಕಾರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಗ್ರಾಮಸ್ಥರು, ಇತರರು ಇದ್ದರು.