Breaking News
Home / Recent Posts / ತಾಲೂಕಾ ಮಟ್ಟದ ಯುವ ಮಂಡಳಗಳ ಅಭಿವೃದ್ದಿ ಅಭಯಾನದ ಸಮಾರೋಪ ಸಮಾರಂಭ

ತಾಲೂಕಾ ಮಟ್ಟದ ಯುವ ಮಂಡಳಗಳ ಅಭಿವೃದ್ದಿ ಅಭಯಾನದ ಸಮಾರೋಪ ಸಮಾರಂಭ

Spread the love

ತಾಲೂಕಾ ಮಟ್ಟದ ಯುವ ಮಂಡಳಗಳ ಅಭಿವೃದ್ದಿ ಅಭಯಾನದ ಸಮಾರೋಪ ಸಮಾರಂಭ

ಮೂಡಲಗಿ: ಮಹಾಮಾರಿ ಕೊರೋನಾ ಮನುಷ್ಯರ ಬಲಿ ಪಡಿಯುವುದರ ಜೊತೆಗೆ ಯಾವರೀತಿಯಾಗಿ ಬದುಕಬೇಕು ಎನ್ನುವುದು ಕಲಿಸಿಕೊಟ್ಟಿದೆ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು.
ಅವರು ಮೂಡಲಗಿ ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಹಾಗೂ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣಾಭಿವೃದ್ದಿ ಸಂಘ ಮತ್ತು ಮಹರ್ಷಿ ವಾಲ್ಮೀಕಿ ಯುವಕ ಸಂಘದ ಆಶ್ರಯದಲ್ಲಿ ತಾಲೂಕಾ ಮಟ್ಟದ ಯುವ ಮಂಡಳಗಳ ಅಭಿವೃದ್ದಿ ಅಭಯಾನದ ಸಮಾರೋಪ ಸಮಾರಂಭ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಯಮನಪ್ಪ ಕಲ್ಲೋಳಿಯವರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಸಸಿಗೆ ನೀರು ಉನಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಕೊರೋನಾ ಮನುಷ್ಯನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ ಸ್ವಚ್ಛತೆ ಬಗ್ಗೆ, ಪರಿಸರ ಸ್ವಚ್ಛತೆ ಬಗ್ಗೆ ಅನೇಕ ಜಾಗೃತಿಯನ್ನು ಮೂಡಿಸಿದೆ ಎಂದು ಹೇಳಿದರು.
ಹಳ್ಳೂರ ಸರ್ಕಾರಿ ಕಾಲೇಜಿನ ಉಪನ್ಯಾಸಕ ಸುಭಾಷ ಪತ್ತಾರ ಮಾತನಾಡಿ, ಗ್ರಾಮೀಣ ಕ್ರೀಡೆಗಳಿಗೆ ಇವರುವಂತ ಶಕ್ತಿ ಬೇರೆಯಾವುದೇ ಕ್ರೀಡೆಗಳಲ್ಲಿ ಇಲ್ಲ, ಗ್ರಾಮೀಣ ಭಾಗದಲ್ಲಿ ಪುರಾತನ ಕಾಲದಿಂದಲೂ ಬಂದ ಗ್ರಾಮೀಣ ಕ್ರೀಡೆಗಳು ಇಂದು ಕಲಿಯುಗದ ಕ್ರೀಡೆಗಳಿಗೆ ಒಂದು ವರದಾನವಾಗಿದೆ, ಪತ್ರಿಯೊಂದು ಹಳ್ಳಿಗಳಲ್ಲಿ ಗರಡಿ ಮನೆಗಳು ಆಗಿನ ಕ್ರೀಡಾ ಪಟುಗಳಿಗೆ ಆಸರೆಯಾಗಿದ್ದವು ಆದರೆ ಇಂದು ಅವುಗಳು ಮಾಯವಾಗುವಂತ ಪರಸ್ಥಿತಿಗಳು ಇಂದಿನ ದಿನಮಾನಗಲ್ಲಿ ನಿರ್ಮಾಣವಾಗುತ್ತಿದೆ. ಅಂತಹ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಯುವ ಸಂಘಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇರುವ ಯುವ ಸಂಘಗಳು ಇಚ್ಚಿತೀಗೆ ತನ್ನ ಕಾರ್ಯ ಚಟುವಟಿಕ್ಕೆಗಳಿಂದ ದೂರ ಉಳಿತ್ತಿದ್ದು, ಅಂತಹ ಸಂಘಗಳನ್ನು ಗುರುತಿಸಿ ಮತ್ತೇ ಚಿಗಿರುವಂತೆ ಮಾಡುವ ಕಾರ್ಯವನ್ನು ನೆಹರು ಯುವ ಕೇಂದ್ರ ಮಾಡುತ್ತಿದೆ. ಒಂದು ಸಸಿ ಬೆಳೆದು ದೊಡ್ಡದಾಗಬೇಕಾದರೆ ಅದಕ್ಕೆ ನೀರು ಹೇಗೆ ಅವಶವ್ಯವಾಗಿದೆಯೋ ಹಾಗೆ ಸಂಘಗಳು ತಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಾದರೆ ಯುವಕರ ಸಹಕಾರ ಮತ್ತು ನಿಶ್ವಾರ್ಥ ಸೇವೆ ಬಹಳ ಅಗತ್ಯವಾಗಿದೆ ಎಂದರು.
ಮಹರ್ಷಿ ವಾಲ್ಮೀಕಿ ಯುವಕ ಸಂಘ ಅಧ್ಯಕ್ಷ ಯಲ್ಲಾಲಿಂಗ ವಾಳದ ಮಾತನಾಡಿದರು, ಇದೇ ಸಂದರ್ಭದಲ್ಲಿ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಯಮನಪ್ಪ ಕಲ್ಲೋಳಿಯವರಿಗೆ ಸನ್ಮಾನಿಸಿ ಗೌರವಿಸಿದರು ಹಾಗೂ ನೆಹರು ಯುವ ಕೇಂದ್ರದಿಂದ ಕೊರೋನಾ ಜಾಗೃತಿ ಕುರಿತು ಕರಪತ್ರ ಬೀಡುಗಡೆ ಮಾಡಿದರು.
ಕರುನಾಡು ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷೆ ಸವಿತಾ ತುಕ್ಕನ್ನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಈ ಸಂದರ್ಭದಲ್ಲಿ ಯುವ ಮುಖಂಡ ಸಿದ್ದು ಗಡ್ಡೆಕಾರ, ಲಕ್ಷ್ಮೀಬಾಯಿ ಜೋಕಾನಟ್ಟಿ, ಶಿಕ್ಷಕ ಚಂದ್ರಕಾಂತ ಪೂಜೇರಿ ಹಾಗೂ ಸೈನಿಕ ಕೇಂದ್ರ ಶಿಬಿರಾರ್ಥಿಗಳು, ಯುವ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಕಡೆ ಓಕುಳಿ ದಿನ ಜೂ.9ರಂದು ವಿಜೃಂಭನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ