ಪತ್ರಕರ್ತರು ಸಮಾಜ ಗುರುತಿಸುವ ಕಾರ್ಯ ಮಾಡಬೇಕು – ಬಾಲಶೇಖರ ಬಂದಿ
ಮೂಡಲಗಿ: ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಹವ್ಯಾಸದಿಂದ ಸಾಧನೆ ಸಾಧ್ಯ ಎಂದು ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ಹಳ್ಳೂರ ಗ್ರಾಪಂ ಸದಸ್ಯ, ಬಿಜೆಪಿ ಮುಖಂಡ ಹನಮಂತ ತೇರದಾಳ ಅವರು ತಮ್ಮ ನಿವಾಸದಲ್ಲಿ ಮೂಡಲಗಿ ತಾಲೂಕಾ ಪ್ರೇಸ್ ಅಸೋಸಿಷಯನ್ (ಪ್ರೇಸ್ ಕ್ಲಬ್) ಗೆ ನೂತನ ಪದಾಧಿಕಾರಿಗಳಿಗೆ ಎರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಖ್ಯಾತ ಸಾಹಿತಿಗಳು, ವಿಜ್ಞಾನಿಗಳು, ಪತ್ರಕರ್ತರೂ ನಿರಂತರ ಓದಿನ ಮೂಲಕ ಸಾಧನೆ ಮಾಡಿದ್ದಾರೆ. ಇಂದಿನ ಯುವ ಜನತೆ ಮೊಬೈಲ್ ಗೀಳಿಗೆ ಅಂಟಿಕೊಳ್ಳದೆ ಸತತ ಓದಿನ ಮೂಲಕ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ವಿಯಾಗಬೇಕೆಂದರಲ್ಲದೆ, ಪತ್ರಕರ್ತರು ಶ್ರದ್ಧೆ,ಪ್ರಾಮಾಣಿಕತೆಯಿಂದ ಸಮಾಜ ಗುರುತಿಸುವ ಕಾರ್ಯ ಮಾಡಬೇಕು ಎಂದರು.
ತಾಲೂಕಾ ಪ್ರೇಸ್ ಅಸೋಸಿಷಯನ್ ಅಧ್ಯಕ್ಷ ಎಲ್.ವಾಯ್ ಅಡಿಹುಡಿ, ಉಪಾಧ್ಯಕ್ಷ ಅಲ್ತಾಫ್ ಹವಾಲ್ದಾರ, ಕಾರ್ಯದರ್ಶಿ ಎಸ್.ಎಚ್ ಗೊಡ್ಯಾಗೋಳ, ಖಜಾಂಚಿ ಮಹದೇವ ನಡುವಿನಕೇರಿ, ಸಹಕಾರ್ಯದರ್ಶಿ ಶಿವಾನಂದ ಹಿರೇಮಠ ಇವರನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಸುರೇಶ ಡಬ್ಬನವರ, ಮಹಾದೇವ ಹೊಸಟ್ಟಿ, ಸುರೇಶ ಕತ್ತಿ, ಮಲ್ಲಪ್ಪ ಹೊಸಟ್ಟಿ, ಅಡಿವೆಪ್ಪ ಚನ್ನಬಸಪ್ಪಗೋಳ, ಬಸಪ್ಪ ನಾವಿ, ಶ್ರೀಶೈಲ್ ಬಾಗೋಡಿ, ಬಾಳೇಶ ನೆಸೂರ, ಭೀಮಶಿ ಡಬ್ಬನವರ, ಸಂತೋಷ ಉಪಾಧ್ಯೆ, ಲಕ್ಕಪ್ಪ ಸಪ್ತಸಾಗರ,ಪತ್ರಕರ್ತರಾದ ವಿ ಎಚ್ ಬಾಲರಡ್ಡಿ, ಎಸ್ ಎಮ್ ಚಂದ್ರಶೇಖರ ಹಾಗೂ ಗ್ರಾಮದ ಗಣ್ಯರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬಿ.ಜಿ ಸಂತಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.