Breaking News
Home / Recent Posts / ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಕುಟುಂಬಕ್ಕೆ 5ಲಕ್ಷ ರೂಗಳ ಚೆಕ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
????????????????????????????????????

ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಕುಟುಂಬಕ್ಕೆ 5ಲಕ್ಷ ರೂಗಳ ಚೆಕ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಕುಟುಂಬಕ್ಕೆ 5ಲಕ್ಷ ರೂಗಳ ಚೆಕ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಮೂಡಲಗಿ ತಾಲೂಕಿನ ಅರಭಾವಿ (ಹಟ್ಟಿಗುಡ್ಡ) ಪಟ್ಟಣದ ಕುತುಬಸಾಬ ಬಾಗವಾನ ಅವರ ವಾರಸುದಾರರಿಗೆ ಇಂಧನ ಇಲಾಖೆಯಿಂದ 5ಲಕ್ಷ ರೂಗಳ ಪರಿಹಾರಧನದ ಚೆಕ್‌ನ್ನು ನಗರದ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಕೆಎಮ್‌ಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಧನ ಇಲಾಖೆಯಿಂದ ಮಂಜೂರಾದ ಪರಿಹಾರ ಧನವನ್ನು ಕುಟುಂಬದವರು ಸದ್ಭಳಕೆ ಮಾಡಿಕೊಳ್ಳಬೇಕು. ಈ ಹಣವನ್ನು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಬ್ಯಾಂಕ್‌ನಲ್ಲಿ ಠೇವಣಿಯಾಗಿಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕುಟುಂಬದವರು ಮುಂದಾಗಬೇಕು. ಜೀವ ಅಮೂಲ್ಯವಾದದ್ದು ಆದ್ದರಿಂದ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ವಿದ್ಯುತ್ ಅವಘಡಗಳು ಸಂಭವಿಸದoತೆ ಜಾಗೃತಿಯನ್ನು ವಹಿಸಬೇಕು. ಕೃಷಿಗಾಗಿ ವಿದ್ಯುತ್ ಬಳಕೆ ಮಾಡುತ್ತಿರುವ ಸಂದರ್ಭದಲ್ಲಿ ರೈತರು ಮುಂಜಾಗೃತೆಯಿoದ ಕೆಲಸವನ್ನು ಮಾಡಬೇಕು.

ಯಾವುದೇ ಸಂದರ್ಭವಿರಲಿ ವಿದ್ಯುತ್ ಬಳಕೆ ಸಂದರ್ಭದಲ್ಲಿ ನಿರ್ಲಕ್ಷವನ್ನು ಮಾಡಬಾರದೆಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಘಟಪ್ರಭಾ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರ ಕಿರಣ ಸಣ್ಣಕ್ಕಿ, ಮೂಡಲಗಿ ಹೆಸ್ಕಾಂನ ಎಇಇ ಎಮ್.ಎಸ್.ನಾಗನ್ನವರ, ಅರಭಾವಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷೆ ಪದ್ಮಾವತಿ ದೇವುಗೋಳ, ಸದಸ್ಯ ಕುಮಾರ ಪೂಜೇರಿ, ಜಿ.ಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ, ಅರಭಾವಿ ಬಿಜೆಪಿ ಮಂಡಲ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಇಕ್ಬಾಲ ಸರ್ಕಾವಸ್, ರಮೇಶ ಬಿಲಕುಂದಿ, ಮಹಾದೇವ ಝಲ್ಲಿ, ಬಸು ಈಳಿಗೇರ ಹಾಗೂ ಬಾಗವಾನ ಕುಟುಂಬದವರು ಉಪಸ್ಥಿತರಿದ್ದರು.

ಕಳೆದ ವರ್ಷದ ಮೇ 7ರಂದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಕುತುಬಸಾಬ ಬಾಗವಾನ ಅವರು ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.


Spread the love

About inmudalgi

Check Also

19ನೇ ಶಿವಾನುಭವ ಗೋಷ್ಠಿ, ‘ಶುದ್ಧ ಕಾಯಕದಿಂದ ಜೀವನದಲ್ಲಿ ಸಂತೃಪ್ತಿ’

Spread the loveಮೂಡಲಗಿ: ‘ಪ್ರಾಮಾಣಿಕತೆ ಮತ್ತು ಶುದ್ಧ ಕಾಯಕದಿಂದ ಜೀವನದಲ್ಲಿ ಆನಂದ ಮತ್ತು ಸಂತೃಪ್ತಿ ದೊರೆಯುತ್ತದೆ” ಎಂದು ಅರಭಾವಿ ಮಠದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ