Breaking News
Home / Recent Posts / ಪೋಲಿಸ್ ಸಿಬ್ಬಂದಿಗೆ ಉಪಹಾರ ವ್ಯವಸ್ಥೆ

ಪೋಲಿಸ್ ಸಿಬ್ಬಂದಿಗೆ ಉಪಹಾರ ವ್ಯವಸ್ಥೆ

Spread the love

ಪೋಲಿಸ್ ಸಿಬ್ಬಂದಿಗೆ ಉಪಹಾರ ವ್ಯವಸ್ಥೆ

ಮೂಡಲಗಿ: ಕೊರೋನಾ ವೈರಸ್ ಸೋಂಕು ನಿಯಂತ್ರಣದ ಲಾಕ್‍ಡೌನ್ ಸಮಯದಲ್ಲಿ ಬಿಸಿಲು,ಗಾಳಿ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ ಸಿಬ್ಬಂದಿಗೆ ಮತ್ತು ಯಾವುದೇ ಫಲಾಪೇಕ್ಷೆ ಇಲ್ಲದೆ ಕೋವಿಡ್‍ನಿಂದ ಮೃತಪಟ್ಟ ಶವಗಳನ್ನು ಅಂತ್ಯ ಸಂಸ್ಕಾರ ಮಾಡುತ್ತಿರುವ ಅಂಜುಮನ್ ಇಸ್ಲಾಂ ಕಮಿಟಿ ಯುವ ಪಡೆಗೆ, ಹಾಗೂ ಪತ್ರಕರ್ತರಿಗೆ ಇಲ್ಲಿಯ ಶಿವಲಿಂಗೇಶ್ವರ ಕ್ಯಾಂಟಿನ್ ಮಾಲಿಕ ಚನ್ನಯ್ಯಾ ನಿರ್ವಾಣಿ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದರು.
ಉಪಹಾರಅಹಾರ ವಿತರಿಸಿ ಮಾತನಾಡಿದ ಅವರು, ಈ ಲಾಕ್‍ಡೌನ ಸಮಯದಲ್ಲಿ ಕೊರೋನಾ ಯೋಧರಾಗಿ ಸಾರ್ವಜನಿಕರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಪೋಲಿಸ ಸಿಬ್ಬಂದಿಗಳ ಕಾರ್ಯ, ಪತ್ರಕರ್ತರ ಕಾರ್ಯ ಮತ್ತು ಮಾನವೀಯತೆ ಕಾರ್ಯ ಮಾಡುತ್ತಿರುವ ಅಂಜುಮನ ಯುವಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಪಿಎಸ್‍ಐ ಎಚ್ ವಾಯ್ ಬಾಲದಂಡಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಶಿವಾನಂದ ನಿರ್ವಾಣಿ, ರಾಚಯ್ಯ ನಿರ್ವಾಣಿ, ನಿಂಗಯ್ಯ ನಿರ್ವಾಣಿ, ಪೋಲಿಸ ಸಿಬ್ಬಂದಿ, ಅಂಜುಮನ ಯುವಕರು ಹಾಗೂ ಪತ್ರಕರ್ತರು ಇದ್ದರು.


Spread the love

About inmudalgi

Check Also

ಮಂಜು ಬೀಳುತ್ತಿರುವದು ಇಲ್ಲಿಯ ವಾಹನ ಸವಾರರು ಮತ್ತು ರೈತರು ಆತಂಕದಲಿ.!

Spread the loveಮಂಜು ಬೀಳುತ್ತಿರುವದು ಇಲ್ಲಿಯ ವಾಹನ ಸವಾರರು ಮತ್ತು ರೈತರು ಆತಂಕದಲಿ.! *ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ