ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಘವೇಂದ್ರ ತಮ್ಮಣ್ಣಾ ಶ್ಯಾಬನ್ನವರ ರಾಷ್ಟ್ರಮಟ್ಟಕ್ಕೆ ಆಯ್ಕೆ
ಮೂಡಲಗಿ: ಸ್ಥಳೀಯ ಚೈತನ್ಯ ಅಶ್ರಮ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಕುಮಾರ ರಾಘವೇಂದ್ರ ತಮ್ಮಣ್ಣಾ ಶ್ಯಾಬನ್ನವರ 10 ನೇ ವರ್ಗದ ವಿದ್ಯಾರ್ಥಿ “BEST OUT OF WASTE” ಎಂಬ ವಿಷಯದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ 27/01/2023 ರಂದು ಕೇರಳ ರಾಜ್ಯದ ತ್ರಿಸುರಾ ಜಿಲ್ಲೆಯಲ್ಲಿ ನಡೆಯಿವ ವಸ್ತು ಪ್ರದರ್ಶನದಲ್ಲಿ ಭಾಗವಹಿಸುವರು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗೂ ಮತ್ತು ಮಾರ್ಗದರ್ಶನ ಮಾಡಿದ ಶಿಕ್ಷಕರಾದ ಮಲೀಕ ಸತ್ತಿ ಇವರಿಗೆ ಸನ್ಮಾನಿಸಲಾಯಿತು.
ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಹೊಗಲು ಗುರುವಿನ ಮಾರ್ಗದರ್ಶನ ಅತಿ ಅವಶ್ಯ ಗುರುಗಳು ದ್ರೋಣಾಚಾರ್ಯರಾಗಿ ಮಾರ್ಗದರ್ಶನ ಮಾಡಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ದೊಡ್ಡ ಕನಸನ್ನು ಕಾಣಿರಿ ಎಂತಹ ಕನಸು ಕಾಣಬೇಕು ಅಂದರೆ ನಮಗೆ ನಿದ್ದೆ ಹತ್ತಬಾರದು ಅಂತಹ ಕನಸನ್ನು ಕಾಣಬೇಕು ನಮ್ಮದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ತತ್ವಗಳನ್ನು ಅಳವಡಿಸಿಕೊಳ್ಳಿ ಅಂತ ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಎಮ್. ಕಮದಾಳ ಹೇಳಿದರು.
ತಮ್ಮ ಇಷ್ಟವಾದ ಕ್ಷೇತ್ರಗಳಲ್ಲಿ ಏನನ್ನಾದರು ಸಾಧಿಸಿ ಅಂತ ಕಿವಿ ಮಾತು ಹೇಳಿ ಶಿಕ್ಷಕ ರಾದ ವಾಯ್.ಬಿ. ಪಾಟೀಲ ಕಾರ್ಯಕ್ರಮದ ಕುರಿತು ಮಾತನಾಡಿದರು. ಉಭಯ ಮಾಧ್ಯಮ ಮುಖ್ಯೋಪಾಧ್ಯಾಯರು ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿದಕ್ಕೆ ಅಭಿನಂದನೆ ಸಲ್ಲಿಸಿದರು, ರಮೇಶ ಬಿರಾದರ ಕಾರ್ಯಕ್ರಮ ನಿರೂಪಿಸಿದರು.