ದಿ.೧೯ ರಿಂದ ಶ್ರೀ ಗಾಳೇಶ್ವರ ಜಾತ್ರಾಮಹೋತ್ಸವ
ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ಸುಕ್ಷೇತ್ರ ತೊಂಡಿಕಟ್ಟಿ ಗ್ರಾಮದ ಶ್ರೀ ಅವಧೂತಗಾಳೇಶ್ವರ ಮಹಾಸ್ವಾಮಿಗಳ ೮೧ನೇ ಪುಣ್ಯಾರಾಧನೆಯ ಮತ್ತು ಪರಮ ಪೂಜ್ಯ ಪುಂಡಲೀಕ ಮಹಾರಾಜರ ೮೬ನೇ ಹುಟ್ಟುಹಬ್ಬ, ಕಿರೀಟ ಪೂಜೆ ಕಾರ್ಯಕ್ರಮ ಡಿ.೧೯ ರಿಂದ ೨೩ರವರಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಮಠದ ಪೀಠಾಧಿಪತಿ ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರ ಸಾನ್ನಿಧ್ಯದಲ್ಲಿ ಜರುಗಲಿದೆ.
ಶುಕ್ರವಾರ ಡಿ.೧೯ ರಂದು ಬೆಳಿಗ್ಗೆ ಕರ್ತೃ ಗದ್ದುಗೆಗಳಿಗೆ ಅಭಿಷೇಕ, ಗೀತಾ ಪಾರಾಯಣ, ಕಲಸಾರೋಹಣ. ಸಾಯಂಕಾಲ ೭=೩೦ ರಿಂದ ಪ್ರವಚನ, ಕೀರ್ತನೆ, ಭಜನೆ ಮೇಳಗಳಿಂದ ಜಾಆಗರಣೆ ಜರುಗುವುದು, ಶನಿವಾರ ಡಿ.೧೯ ಮುಂಜಾಣೆ ೧೧ ಗಂಟೆಯಿAದ ಶ್ರೀಗಳ ಅಶ್ವಾರೋಹಣ ಮೆರವಣಿಗೆ, ಮಹಾಪ್ರಸಾದ ಸಂಜೆ ೫=೩೦ಕ್ಕೆ ಮಹಾರಥೋತ್ಸವ, ೭ ರಿಂದ ಪ್ರವಚನ, ಕೀರ್ತನೆ ಶ್ರೀಗಳ ತುಲಾಭಾರ , ತೊಟ್ಟಿಲೋತ್ಸವ ಹಾಗೂ ಮನೋರಂಜನಾ ಕಾರ್ಯಕ್ರಮ ಜರುಗುವವು, ರವಿವಾರ ಡಿ.೨೧ ರಂದು ಬೆಳಿಗ್ಗೆ ೧೦ಕ್ಕೆ ಸತ್ಸಂಗ ಸಮ್ಮೇಳನ ಸಂಜೆ ೬ ರಿಂದ ಶ್ರೀ ವೆಂಕಟೇಶ್ವರ ವಿದ್ಯಾನಕೇತನ ಶಾಲಾ ವಾರ್ಷಿಕೋತ್ಸ, ಮಕ್ಕಳಿಂದ ಭಕ್ತಿ ಸಂಗೀತ ಮನೋರಂಜನಾ ಕಾರ್ಯಕ್ರಮ ಜರುಗುವವು, ಸೋಮವಾರ ಡಿ.೨೨ ರಂದು ಪುಣ್ಯಾರಾಧನೆಯ(ಜಾತ್ರಾ) ಸಂಧರ್ಭದಲ್ಲಿ ಜರುಗಿದ ವಿವಿಧ ಶರ್ತು, ಬಯಲಾಟಗಳು ಜರುಗುವವು, ಸಂಜೆ ೬ ರಿಂದ ಸ್ವಾಮಿ ದಯಾನಂದ ಅವ್ವ ವಿದ್ಯಾಲಯ ಮಕ್ಕಳಿಂದ ಶಾಲಾ ವಾರ್ಷಿಕೋತ್ಸವ, ಮಕ್ಕಳಿಂದ ಭಕ್ತಿ ಸಂಗೀತ ಜರುಗುವವು, ಮಂಗಳವಾರ ಡಿ.೨೩ ರಂದು ಸಂಜೆ ೬ಕ್ಕೆ ಸಹಸ್ರ ದೀಪೋತ್ಸವ ಹಾಗೂ ಕಳಸವರೋಹಣ ಕಾರ್ಯಕ್ರಮ ಮಹಾಪ್ರಸಾದೊಂದಿಗೆ ಮಹಾಮಂಗಲಗೊಳ್ಳುವುದು.
ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗವಹಿಸುವರು.
IN MUDALGI Latest Kannada News