ಮೂಡಲಗಿ : ಇಲ್ಲಿನ ಕಲ್ಮೇಶ್ವರ ವೃತ್ತದ ಬಳಿ ಇರುವ ಪಂಚಮಸಾಲಿ ಸಮಾಜದ ಶ್ರೀ ಬಸವ ಸೇವಾ ಯುವಕ ಸಂಘದ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಉಮೇಶ ಶೆಕ್ಕಿ, ಉಪಾಧ್ಯಕ್ಷರಾಗಿ ಸಿದ್ದು ಹಳಸಿ, ಕಾರ್ಯದರ್ಶಿಯಾಗಿ ಈರಪ್ಪ ಅಡಿಬಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಂದು ಸಂಘದ ಮಾಜಿ ಅಧ್ಯಕ್ಷ ಕಲ್ಮೇಶ ಗೋಕಾಕ ಅವರು ತಿಳಿಸಿದ್ದಾರೆ.
Read More »Daily Archives: ಜೂನ್ 18, 2025
ರಾಮಪ್ಪ ಯರಗಟ್ಟಿ ನಿಧನ
ಮೂಡಲಗಿ : ತಾಲೂಕಿನ ಕುಲಗೋಡ ಗ್ರಾಮದ ನಿವಾಸಿ ರಾಮಪ್ಪ ತಿಮ್ಮಣಾ ಯರಗಟ್ಟಿ (75) ಬುಧವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Read More »ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು – ಪಿಎಸ್‍ಐ ರಾಜು ಪೂಜಾರಿ
ಮೂಡಲಗಿ: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡಬೇಕು ಮೂಡಲಗಿ ಪೋಲೀಸ್ ಠಾಣೆಯ ಪಿಎಸ್‍ಐ ರಾಜು ಪೂಜಾರಿ ಹೇಳಿದರು. ಅವರು ಪಟ್ಟಣದ ಕೆ.ಹೆಚ್.ಸೋನವಾಲಕರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರದಂದು ಜರುಗಿದ ಮಾದಕ ವಸ್ತು ನಿರ್ಮೂಲನೆ ದಿನಾಚರಣೆಯಲ್ಲಿ ಮಾತನಾಡಿ, ಮಾದಕ ಪದಾರ್ಥಗಳನ್ನು ಬಳಸುವುದು, ಮಾರಾಟ ಮಾಡುವುದು ಮತ್ತು ಬಳಸುವವರ ಸಹವಾಸ ಮಾಡುವುದು ಅಪರಾಧ, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಶಾಲೆಯ …
Read More »ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಮೂಡಲಗಿ: ಮೂಡಲಗಿಯ ಪುರಸಭೆ ವಾರ್ಡ ಸಂಖ್ಯೆ 15ರಲ್ಲಿ ಚರಂಡಿ ನಿರ್ಮಾಣಕ್ಕೆ ಬುಧವಾರ ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಅನ್ವರ ನದಾಫ, ನಿವೃತ್ತ ಶಿಕ್ಷಕ ಕೆ.ಆರ್.ಕೊತ್ತಲ, ಶಿವಬಸು ಸುಣಧೋಳಿ, ಬಿ.ಪಿ.ಬಂದಿ, ಆರೋಗ್ಯ ನಿರೀಕ್ಷಕ ಪ್ರೀತಮ ಬೋವಿ, ಅಕ್ಷಯ ಕಂಬಾರ, ಗುತ್ತಿಗೆದಾರ ರಾಜು ಪೂಜೇರಿ ಮತ್ತಿತರರು …
Read More »ಎಂಜಿನಿಯರಿಂಗ್, ಮೆಡಿಕಲ್ ಪ್ರವೇಶಕ್ಕೆ ವಿದ್ಯಾಪೋಷಕದಿಂದ ಆರ್ಥಿಕ ನೆರವು
ಇಂಜಿನೀಯರಿಂಗ್ ಮತ್ತು ಮೆಡಿಕಲ್ ಪದವಿ ಕಲಿಯಲಿಕ್ಕೆ ಕಳೆದ ವರ್ಷದಲ್ಲಿ ವಿದ್ಯಾಪೋಷಕದಿಂದ ಆರ್ಥಿಕ ಸಹಾಯ ಪಡೆದ ವಿದ್ಯಾರ್ಥಿಗಳು ಮೂಡಲಗಿ: ಧಾರವಾಡದ ವಿದ್ಯಾಪೋಷಕ ಸಂಸ್ಥೆಯು 2025-26ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿ ಪ್ರವೇಶಕ್ಕೆ ಕರ್ನಾಟಕದ ಅರ್ಹ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ನೀಡಲಿದೆ. ವಿದ್ಯಾರ್ಥಿಗಳು 2024-25ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಶೇ.80ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಇಂಜಿನೀಯರಿಂಗ ಮತ್ತು ಮೆಡಿಕಲ್ ಪದವಿಗಳಿಗೆ ಪ್ರವೇಶ …
Read More »