Breaking News
Home / ತಾಲ್ಲೂಕು / ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ : ಡಿ.ವೈ.ಎಸ್.ಪಿ.

ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ : ಡಿ.ವೈ.ಎಸ್.ಪಿ.

Spread the love

ಮೂಡಲಗಿ: ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ : ಡಿ.ವೈ.ಎಸ್.ಪಿ. ಪ್ರಭು ಡಿ.ಟಿ ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಪೋಲೀಸ ಇಲಾಖೆ ವಿನೂತನ ಕಾರ್ಯಕ್ರಮ ಗೋಕಾಕದಿಂದ ಘಟಪ್ರಭಾವರೆಗೆ ಕಾಲ್ನಡಿಗೆ ಜಾಥಾ ಕಾಯ೯ಕ್ರಮಕ್ಕೆ ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡಿದರು.
ದೇಶದಲ್ಲಿ ರಸ್ತೆ ಅಪಘಾತದಲ್ಲಿ ಎಲ್ಲಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪುತ್ತಿದ್ದು ಅದನ್ನು ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದ್ದು ಈ ಕಾಲ್ನಡಿಗೆ ಜಾಥಾ ಗೋಕಾಕ ಮತ್ತು ಘಟಪ್ರಭಾ ಮೂಡಲಗಿ ಸುತ್ತ ಮುತ್ತಲಿನ ಗ್ರಾಮಗಳ ಜನರು ಹಾಗೂ ಅನೇಕ ಸಂಘ ಸಂಸ್ಥೆಗಳು ಮತ್ತು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ ಇಲಾಖೆಯವರು ಪಾಲ್ಗೊಂಡಿದ್ದರು. ನಗರದ ನಾಕಾ ನಂ. 1 ರಿಂದ ಜಾಥಾ ಪ್ರಾರಂಭವಾಗಿ ಲೋಳಸೂರ, ಅರಭಾಂವಿ, ಅರಭಾಂವಿ ಮಠ, ಶಿಂದಿಕುರಬೇಟ ಮೂಲಕ ಘಟಪ್ರಭಾಗೆ ಆಗಮಿಸಿ ಪಟ್ಟಣದಲ್ಲಿ ಜಾಥಾ ನಡೆಸಿ ಪೋಲೀಸ ಠಾಣೆಗೆ ಬಂದು ಅಲ್ಲಿ ಕಾಯ೯ಕ್ರಮದ ಉದ್ದೇಶಿಸಿ ಅನೇಕ ಸಂಘದ ಪದಾಧಿಕಾರಿಗಳು ಮಾತನಾಡಿದರು.
ಈ ಕಾಲ್ನಡಿಗೆ ಜಾಥಾದಲ್ಲಿ ಸಾರ್ವಜನಿಕರು, ಹಾಗೂ ಇಪ್ಪತ್ತೈದಕು ಅಧಿಕ ಸಂಘ-ಸಂಸ್ಥೆಗಳು ಪಾಲ್ಗೊಂಡಿದ್ದವು

ವರದಿ- ಈರಪ್ಪಾ ಢವಳೇಶ್ವರ


Spread the love

About inmudalgi

Check Also

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ಎಸ್.ಸಿ/ಎಸ್.ಟಿ ಹಾಗೂ ಅಲ್ಪ ಅಲ್ಪಸಂಖ್ಯಾತರ ಶಾಖಾ ಘಟಕ ಉದ್ಘಾಟನೆ

Spread the loveಮೂಡಲಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯು ಸಮಜದಲ್ಲಿ ಹಿಂದುಳಿದ ಜನರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ