ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ
ಪಂಚಾಯಿತಿ ಕಾರ್ಯಾಲಯದಲ್ಲಿ ಜು.29 ರಂದು ಶಿವಶರಣ ಹಡಪದ ಅಪ್ಪಣ್ಣವರ ಜಯಂತಿ ಆಚರಿಸಲಾಯಿತು.
ಸ್ಥಳೀಯ ಗ್ರಾಪಂ ಪಿಡಿಒ ಶಿವಾನಂದ ಪತ್ತಾರ ಶಿವಶರಣ
ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಿಹಿ
ವಿತರಿಸಲಾಯಿತು. ಸ್ಥಳೀಯ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕ ಬಸವರಾಜ ಪಣದಿ ಶಿವಶರಣ ಅಪ್ಪಣ್ಣ ಅವರ ಕುರಿತು ಮಾತನಾಡಿದರು.
ಗ್ರಾಪಂ ಕಾರ್ಯದರ್ಶಿ ಮಾರುತಿ ತಳವಾರÀ, ವಿಠ್ಠಲ ಚಂದರಗಿ,ಶಿವಾನಂದ ಐದುಡ್ಡಿ, ಈರಪ್ಪ ದಂಡಿನ, ಸಿದ್ರಾಮ ಚಂದರಗಿ, ಮೆಳೆಪ್ಪ ಹರಿಜನ, ಸಾಂವಕ್ಕಾ ಹರಿಜನ, ಲಕ್ಕಮ್ಮ ಚಂದರಗಿ, ಲಕ್ಕವ್ವ ಆಶೆಪ್ಪಗೋಳ, ಬಸವರಾಜ ನಾವಿ, ಕಲ್ಲಪ್ಪ ಹಡಪದ, ಅರ್ಜುನ ಹರಿಜನ ಸೇರಿದಂತೆ ಗ್ರಾಪಂ ಮಾಜಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ,ಸ್ಥಳೀಯ ಹಡಪದ ಸಮಾಜದ ಹಿರಿಯರು, ಕಿರಿಯ ನಾಗರಿಕರು,ಸ್ಥಳೀಯರು, ಇತರರು ಇದ್ದರು.
IN MUDALGI Latest Kannada News