Breaking News

Classic Layout

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ 250 ಕುಟುಂಬಗಳಿಗೆ ಸಮಜ್ಯಕಲ್ಯಾಣ ಇಲಾಖೆಯಿಂದ ಉಚಿತ ಅಹಾರ ದಾನ್ಯ ವಿತರಣೆ.

  ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ 250 ಕುಟುಂಬಗಳಿಗೆ ಸಮಜ್ಯಕಲ್ಯಾಣ ಇಲಾಖೆಯಿಂದ ಉಚಿತ ಅಹಾರ ದಾನ್ಯ ವಿತರಣೆ. ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಒಟ್ಟು 250 ಕುಟುಂಬಗಳಿಗೆ ಸಮಜ್ಯಕಲ್ಯಾಣ ಇಲಾಖೆಯಿಂದ ಉಳಿತಾಯದ ಆಹಾರ ದಾನ್ಯ ವಿತರಣೆ ಇಂದು ಮುಂಜಾನೆ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಿಟ್ …

Read More »

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರು ಅವರ ಜನರ ಕಷ್ಟ ನೀಗಿಸುವುದರಲ್ಲಿ ನಿರತರಾಗಿದ್ದಾರೆ

ಮೂಡಲಗಿ : ಈ ಮಹಾಮಾರಿ ಕೊರೋನಾ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಸಹಾಯ ಹಸ್ತ ನೀಡುವುದರೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರು ಅವರ ಜನರ ಕಷ್ಟ ನೀಗಿಸುವುದರಲ್ಲಿ ನಿರತರಾಗಿದ್ದಾರೆ ಆದರಿಂದ ಜನರು ಯಾವುದೇ ಕಾರಣಕ್ಕೂ ಭಯಭೀತರಾಗದೆ ಸರ್ಕಾರದ ನಿಯಗಳನ್ನು ಪಾಲಿಸಬೇಕೆಂದು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಹೇಳಿದರು. ಸೋಮವಾರದಂದು ಪಟ್ಟಣದ ವಡ್ಡರ ಓಣಿಯ ಸಭಾ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯವರು ಹಮ್ಮಿಕೊಂಡ ಕೊರೋನಾ ಸಂಕಷ್ಟದಲ್ಲಿರುವ …

Read More »

ಜನರ ಮನೋಭಾವನೆಯನ್ನು ಅರಿತು ಕೆಲಸ ಮಾಡಿದರೆ ಯಶಸ್ಸು ಖಂಡಿತವಾಗಿಯೂ ದೊರೆಯುವುದು- ಡಾ. ಮೋಹನಕುಮಾರ ಭಸ್ಮೆ

ಮೂಡಲಗಿ : ಸ್ಥಳೀಯ ತಹಶೀಲ್ದಾರ ಆಗಿ ಬೆಳಗಾವಿ ಲೋಕಸಭಾ ಉಪಚುನಾವಣೆ ನಿಮಿತ್ಯವಾಗಿ ನೇಮಕಗೊಂಡು ಚುನಾವಣೆ ಹಾಗೂ ಈ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಉತ್ತಮ ಸೇವೆಗೈದು ಇದೀಗ ಮತ್ತೇ ರಾಯಬಾಗಕ್ಕೆ ವರ್ಗಾವಣೆಗೊಂಡ ದಕ್ಷ ಮತ್ತು ಪ್ರಾಮಾಣಿಕ ಡಾ. ಮೋಹನಕುಮಾರ ಭಸ್ಮೆ ಅವರನ್ನು ಸೋಮವಾರದದು ಪತ್ರಕರ್ತರು ಸತ್ಕರಿಸಿ ಬೀಳ್ಕೊಟ್ಟರು. ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಚುನಾವಣೆ ನಿಮಿತ್ಯ ನೇಮಕಗೊಂಡು ಚುನಾವಣೆ ಮುಗಿದ ಬಳಿಕ ವರ್ಗಾವಣೆ ಆಗುವುದು ಅನಿವಾರ್ಯ, ಜನರ ಮನೋಭಾವನೆಯನ್ನು ಅರಿತು ಕೆಲಸ …

Read More »

ಪ್ರಾಧಿಕಾರ ಅಭಿವೃದ್ಧಿ ಯೋಜನೆಯಡಿಯಲ್ಲಿ ಕ್ಷೇತ್ರದ ಕುಲಗೋಡ ಆಸ್ಪತ್ರೆಗೆ ಅಂಬ್ಯುಲೇನ್ಸ

ಶಾಸಕರ ನಿಧಿಯಿಂದ ಕುಲಗೋಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕವಚ ವಾಹನಗಳನ್ನು ಲೋಕಾರ್ಪಣೆಗೊಳಿಸಿದ ಗ್ರಾಮದ ಮುಖಂಡರು.  ಕುಲಗೋಡ: ಅರಭಾಂವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ನಿಧಿಯಿಂದ ನೀಡಿರುವ ತುರ್ತು ಸೇವೆ ಸೋಂಕಿತರಿಗೆ ಸಹಾಯಕ್ಕಾಗಿ, ಹಾಗೂ ಕುಲಗೋಡ ಸುತ್ತಮುತ್ತಲಿನ ಜನರಿಗೆ ಈ ಆರೋಗ್ಯ ಕವಚ ಸಂಜೀವಿನಿಯಾಗಲಿದೆ. ನಮ್ಮ ಶಾಸಕರು ಪ್ರತಿ ಸಂಕಷ್ಟದಲ್ಲಿ ಜನರಿಗೆ ಹೆಗಲಾಗಿದ್ದಾರೆ ಎಂದು ಗ್ರಾಮ ಮುಖಂಡ ಗ್ರಾ.ಪಂ ಸದಸ್ಯ ಬಸನಗೌಡ ಪಾಟೀಲ ಹೇಳಿದರು. ಅವರು ಸೋಮವಾರ ಮೂಡಲಗಿ ತಾಲೂಕಿನ ಕುಲಗೋಡ …

Read More »

ರಂಗವ್ವ ಬಾಲನಾಯಿಕ. ನಿಧನ

ನಿಧನ ವಾರ್ತೆ ರಂಗವ್ವ ಬಾಲನಾಯಿಕ ಮೂಡಲಗಿ: ತಾಲೂಕಿನ ಪುಲಗಡ್ಡಿ ಗ್ರಾಮದ ನಿವಾಸಿ ಹಾಗೂ ಮೂಡಲಗಿ ತಾಲೂಕಾ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಸುಭಾಸ ಬಾಲನಾಯಿಕ ಅವರ ತಾಯಿ ಶ್ರೀಮತಿ ರಂಗವ್ವ ಕಲ್ಲಪ್ಪ ಬಾಲನಾಯಿಕ (77) ರವಿವಾರ ನಿಧನರಾದರು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Read More »

ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದು ಸಸಿ ನೆಟ್ಟು ಅರಣ್ಯ ಬೆಳಸಿ ನಾಡು ಉಳಿಸಿ

ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದು ಸಸಿ ನೆಟ್ಟು ಅರಣ್ಯ ಬೆಳಸಿ ನಾಡು ಉಳಿಸಿ, ಹಸಿರೇ ನಮ್ಮೆಲ್ಲರಿಗೂ ಉಸಿರಾಗಿದೆ ಎಂದು ಹೊಸಟ್ಟಿ ಗ್ರಾಮದ ಬೀಟ್ ಪೊಲೀಸ್ ಪೇದೆ ಬಸಪ್ಪ ಕ್ವಾನ್ಯಾಗೋಳ ಹೇಳಿದರು. ಸಮೀಪದ ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಶನಿವಾರದಂದು ಹೊಸಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು, ನೀರು ಹಾಕಿ ಮಾತನಾಡಿ, ಅರಣ್ಯ ಸಂಪತ್ತು ಉಳಿಸಿ, …

Read More »

ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ

ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ” ವೆಂಬಂತೆ ಶಿವಾಪೂರ(ಹ) ಗ್ರಾಮದಲ್ಲಿ ನೆಲೆಸಿದ್ದ  ಆಧ್ಯಾತ್ಮ ಜೀವಿಗಳು ವಾಸ್ತು ತಜ್ಞರು ದೇವಿ ಆರಾಧಕರು ಆದಂತಹ ಶ್ರೀ ಮಲ್ಲಿಕಾರ್ಜುನ ಶರಣರು ಬಸವಾಶ್ರಮ (ಮಲ್ಲಪ್ಪ ವೆಂಕಪ್ಪ ಹೂಗಾರ, ಹೂಲಿಕಟ್ಟಿ, ಶಿವಾಪೂರ(ಹ) ಇವರು ಶಿವಾಧೀನರಾಗುವದರೊಂದಿಗೆ ಪುರದ ಪುಣ್ಯವೇ ಪುರುಷ ರೂಪದಿಂದ ಹೊರಟಂತೆ ಅಭಾಸವಾಯಿತು. ಶ್ರೀಯುತರು ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಸುಸಂಸ್ಕೃತದ ಮನೆತನದ ಶರಣ ದಂಪತಿಗಳಾದ ಶ್ರೀ ವೆಂಕಪ್ಪ ಹೂಗಾರ …

Read More »

ತಳಕಟನ್ನಾಳ ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಮೂಡಲಗಿ: ತಳಕಟನ್ನಾಳ ಗ್ರಾ.ಪಂ ಗ್ರಾಮದ ಸರಕಾರಿ ಶಾಲೆಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲ್ಲಾಯಿತು. ಈರಪ್ಪ ಕೆಂಪಸತ್ತಿ, ಯಮನಪ್ಪ ಮಾದರ, ಕಲ್ಲಪ್ಪ ಪೂಜೇರಿ, ಪುಂಡಲೀಕ ಹುಕ್ಕೇರಿ, ರಾಮಸಿದ್ದ ಗುಡದನ್ನವರ, ಬಸಪ್ಪ ಸೋಂಟನ್ನವರ, ನಿಂಗಪ್ಪ ಗೋಟುರ, ಕಾಡಪ್ಪ ಬಾನಿ, ರಮೇಶ ಭಜಂತ್ರಿ ಇದ್ದರು.

Read More »

ಚೈತನ್ಯ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಮೂಡಲಗಿ: ಪಟ್ಟಣದ ಚೈತನ್ಯ ವಸತಿ ಶಾಲೆಯಲ್ಲಿ ಪುಟ್ಟ ಬಾಲಕ ಮಹಾಂತೇಶ ಸಸಿ ನೇಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದನು, ಈ ಸಮಯದಲ್ಲಿ ವಾಯ್.ಬಿ.ಪಾಟೀಲ, ವಿಜಯ ಹೊರಟ್ಟಿ, ಎಸ್.ಎಸ್.ಪಾಟೀಲ ಮತ್ತಿತರು ಇದ್ದರು.

Read More »

ಅರಭಾವಿ ಪಟ್ಟಣದಲ್ಲಿ ಅರಭಾವಿ ಮಂಡಲ ಬಿಜೆಪಿ ಯುವ ಮೋರ್ಚಾದಿಂದ ವಿಶ್ವ ಪರಿಸರ ದಿನಾಚರಣೆ

ಮೂಡಲಗಿ: ಅರಭಾವಿ ಪಟ್ಟಣದಲ್ಲಿ ಅರಭಾವಿ ಮಂಡಲ ಬಿಜೆಪಿ ಯುವ ಮೋರ್ಚಾದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗಾನಟ್ಟಿ ನೇತೃತ್ವದಲ್ಲಿ ಆಚರಿಸಲ್ಲಾಯಿತು. ಮಂಜು ಜಲ್ಲಿ, ಶಿವು ದೊಡಗೋಣಿ, ಶ್ರೀಧರ ಸಲಬನ್ನವರ, ಇಕ್ಬಾಲ್ ಸರ್ಕಾವಸ್. ಕುಮಾರ ಪೂಜೇರಿ, ಕೃಷ್ಣಾ ಬಂಡಿವಡ್ಡರ, ಉದಯ ಗುಡದನ್ನರ ಮತ್ತಿತರು ಇದ್ದರು.

Read More »