inmudalgi
ಜೂನ್ 5, 2021 Recent Posts, ತಾಲ್ಲೂಕು, ಬೆಳಗಾವಿ
ಪೋಲಿಸ್ ಸಿಬ್ಬಂದಿಗೆ ಆಹಾರ ವ್ಯವಸ್ಥೆ ಮೂಡಲಗಿ: ಕೊರೋನಾ ವೈರಸ್ ಸೋಂಕು ನಿಯಂತ್ರಣದ ಲಾಕ್‍ಡೌನ್ ಸಮಯದಲ್ಲಿ ಬಿಸಿಲು,ಗಾಳಿ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ ಸಿಬ್ಬಂದಿಗಳಿಗೆ ಶನಿವಾರ ಮಧ್ಯಾಹ್ನ ಇಲ್ಲಿಯ ಕಲ್ಪವೃಕ್ಷ ಹೊಟೇಲ ಮಾಲಿಕ ವೆಂಕಟೇಶ ಕುದರಿ ಊಟದ ವ್ಯವಸ್ಥೆ ಮಾಡಿಸಿ ಮಾನವೀಯತೆ ಮೆರೆದರು. ಠಾಣೆಯ ಆವರಣದಲ್ಲಿ ಸಿಬ್ಬಂದಿಗಳಿಗೆ ಅಹಾರ ವಿತರಿಸಿ ಮಾತನಾಡಿದ ಅವರು, ಈ ಲಾಕ್‍ಡೌನ ಸಮಯದಲ್ಲಿ ಕೊರೋನಾ ಯೋಧರಾಗಿ ಸಾರ್ವಜನಿಕರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಪೋಲಿಸ ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದೆ ಎಂದರು. …
Read More »
inmudalgi
ಜೂನ್ 5, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಮಾನವನ ಮನುಕುಲದ ಉಳುವಿಗೆ ಸ್ವಚ್ಚ ಪರಿಸರ ಅತಿ ಅವಶ್ಯಕವಾಗಿದೆ ಎಂದು ರಾಜ್ಯ ಯುವ ಪ್ರಶಸ್ತಿ ವಿಜೇತ ಹಾಗೂ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಹೇಳಿದರು. ಅವರು ಹಳ್ಳೂರ ಗ್ರಾಮದ ಶ್ರೀ ಸಿದ್ದಾರೂಢ ಮಠದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮನ್ನು ಗಿಡಗಳನ್ನು ನೆಟ್ಟು ಅವುಗಳಿಗೆ ನೀರು ಹನಿಸುವ ಮೂಲಕ ಚಾಲನೆ ನೀಡೀ ಮಾತನಾಡುತ್ತಾ ಗೀಡಗಳನ್ನು ಮಕ್ಕಳಂತೆ ಪಾಲನೆ ಪೋಷನೆ ಮಾಡಿ ವರ್ಷ ಪೂರ್ತಿ ಬೇಳೆಸುವ ಸಂಕಲ್ಪ ಮಾಡಬೇಕು. ಹಸಿರೆ …
Read More »
inmudalgi
ಜೂನ್ 5, 2021 Recent Posts, ತಾಲ್ಲೂಕು, ಬೆಳಗಾವಿ
ಬೆಟಗೇರಿ:ಗ್ರಾಮದ ಗ್ರಾಮ ಪಂಚಾಯತಿ 15ನೇ ಹಣಕಾಸಿನ ಯೋಜನೆಯ ಅನುದಾನದಡಿಯಲ್ಲಿ ಇಲ್ಲಿಯ ರಾಮಣ್ಣ ಹೊಸಟ್ಟಿ ಅವರ ಮನೆಯಿಂದ ನಿಂಗಾಪೂರ ಮುಖ್ಯ ರಸ್ತೆವರೆಗೆ ರಸ್ತೆ ರಿಪೇರಿ ಕೆಲಸಕ್ಕೆ ಚಾಲನೆ ನೀಡುವ ಭೂಮಿ ಪೂಜಾ ಸರಳ ಕಾರ್ಯಕ್ರಮ ಶನಿವಾರ ಜೂ.5 ರಂದು ನಡೆಯಿತು. ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಕಾಮಗಾರಿ ಕಾರ್ಯಕ್ಕೆ ಚಾಲನೆ ನೀಡಿದರು. ಹನುಮಂತ ವಡೇರ ಭೂಮಿ ಪೂಜೆ ನೆರವೇರಿಸಿದರು. ಗ್ರಾಪಂ ಸದಸ್ಯ ಬಸಪ್ಪ ದಂಡಿನ ಮಾತನಾಡಿ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, …
Read More »
inmudalgi
ಜೂನ್ 5, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ : ಅದ್ಭುತವಾದ ಪತ್ರಿಕಾರಂಗ ಕ್ಷೇತ್ರದಲ್ಲಿ 10 ವರ್ಷಗಳಿಂದ ಸೇವೆ ಸಲ್ಲಿಸಿ 11 ವರ್ಷಕ್ಕೆ ಪಾದರ್ಪಣೆ ಮಾಡಿರುವ ಮೂಡಲಗಿ ತಾಲೂಕಾ ಉದಯೋನ್ಮುಖ ಪತ್ರಕರ್ತ ಮಲ್ಲು ಬೋಳನವರ ಅವರ ಪತ್ರಿಕಾರಂಗದ ದಶಮಾನೋತ್ಸವ ಹಾಗೂ ಪರಿಸರ ಪ್ರೇಮಿಯಾದ ಈರಪ್ಪ ಢವಳೇಶ್ವರ ಅವರ ಹುಟ್ಟು ಹಬ್ಬವನ್ನು ಸರಳ ರೀತಿ ಆಚರಿಸಲಾಯಿತು. ಶನಿವಾರದಂದು ಪಟ್ಟಣದಲ್ಲಿ ಮೂಡಲಗಿ ತಾಲೂಕಾ ಪತ್ರಕರ್ತರಿಂದ ಮಲ್ಲು ಬೋಳನವಾರ, ಈರಪ್ಪ ಢವಳೇಶ್ವರ ಅವರಿಗೆ ಸತ್ಕರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತರಾದ ಅಲ್ತಾಫ್ ಹವಾಲ್ದಾರ, …
Read More »
inmudalgi
ಜೂನ್ 5, 2021 Recent Posts, ತಾಲ್ಲೂಕು, ಬೆಳಗಾವಿ
ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ ಮೂಡಲಗಿ: ಸ್ಥಳೀಯ ಸರಕಾರಿ ಕನ್ನಡ ಶಾಲೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ,ಸಸಿ ನೆಟ್ಟು ನೀರು ಉಣಿಸುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚಾರಿಸಲಾಯಿತು. ಈ ಸಂಧರ್ಭದಲ್ಲಿ ಪಿ.ಎಸ್.ಐ. ಎಚ್.ವಾಯ್. ಬಾಲದಂಡಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಕೇದಾರಿ ಭಸ್ಮೆ ಹಾಗೂ ಸಿದ್ದಣ್ಣ ದುರದುಂಡಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ,ಯುವ ಮೋರ್ಚಾ ಉಸ್ತುವಾರಿ ಸದಸ್ಯರಾದ ಪಾಂಡುರಂಗ …
Read More »
inmudalgi
ಜೂನ್ 4, 2021 Recent Posts, ತಾಲ್ಲೂಕು, ಬೆಳಗಾವಿ
ಬಡವರ ಪಾಲಿಗೆ ಸಂಜೀವಿನಿಯಾದ ಶಾಸಕ ಬಾಲಚಂದ್ರ : ಸುಣಧೋಳಿ ಶಿವಾನಂದ ಸ್ವಾಮೀಜಿ ಬಣ್ಣನೆ ಶಾಸಕರ ನಿಧಿಯಿಂದ ನೀಡಲಾದ ಎರಡು ರಕ್ಷಾ ಕವಚ ವಾಹನಗಳನ್ನು ಲೋಕಾರ್ಪಣೆಗೊಳಿಸಿದ ಜಡಿ ಸಿದ್ದೇಶ್ವರ ಮಠದ ಪೀಠಾಧಿಪತಿ ಮೂಡಲಗಿ: ಕೊರೋನಾ ಸೋಂಕಿತರ ನೇರವಿನ ಹಸ್ತ ಹಾಗೂ ಅಮೂಲ್ಯ ಜೀವ ಉಳಿಸುವ ಸಂದರ್ಭದಲ್ಲಿ ಅವಶ್ಯಕವಾಗಿ ಅಂಬ್ಯುಲೆನ್ಸ್‍ಗಳ ಅಗತ್ಯವಿದೆ. ಅರಭಾಂವಿ ಕ್ಷೇತ್ರದ ಶಾಸಕರ ನಿಧಿಯಿಂದ ನೀಡಿರುವ ತುರ್ತು ಸೇವೆ ಸೋಂಕಿತರಿಗೆ ಸಹಕಾರಿಯಾಗುವದು. ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ …
Read More »
inmudalgi
ಜೂನ್ 4, 2021 Recent Posts, ತಾಲ್ಲೂಕು, ಬೆಳಗಾವಿ
ಮಕ್ಕಳ ಮನೆಗೆ ಹಾಲಿನ ಪುಡಿ. ಸಿಎಂ ಯಡಿಯೂರಪ್ಪನವರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ ಸಲ್ಲಿಕೆ. ಕೆಎಂಎಫ್ ಮಾಡಿಕೊಂಡ ಮನವಿಗೆ ಮುಖ್ಯಮಂತ್ರಿಗಳಿಂದ ಪ್ಯಾಕೇಜ್ ಘೋಷಣೆ. ಬೆಂಗಳೂರು : ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಎರಡು ತಿಂಗಳಿಗೆ ಅರ್ಧ ಕೆಜಿ ಕೆನೆಭರಿತ ಪೌಷ್ಠಿಕ ಹಾಲಿನ ಪುಡಿಯನ್ನು ಅವರ ಮನೆಗೆ ವಿತರಿಸಲು ಕೆಎಂಎಫ್ ಮಾಡಿಕೊಂಡ ಮನವಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ …
Read More »
inmudalgi
ಜೂನ್ 3, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ : ಮೂಡಲಗಿಯಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಯನ್ನು ಮಂಜೂರಾತಿ ಪಡೆಯಲು ಇಷ್ಟರಲ್ಲಿಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗುವುದು ಎಂದು ಶಾಸಕ ಹಾಗೂ ಕಹಾಮ ಅಧ್ಯಕ್ಷರು ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದ್ದಾರೆ. ಕಳೆದ ಮಂಗಳವಾರದಂದು ಅಗ್ನಿಶಾಮಕ ಇಲಾಖೆಯೂ ಹೊರಡಿಸಿದ ನೂತನವಾಗಿ ರಚನೆಯಾಗಿರುವ ಅಗ್ನಿಶಾಮಕ ಠಾಣೆಯ ಪಟ್ಟಿಯಲ್ಲಿ ಮೂಡಲಗಿಯನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಮೂಡಲಗಿಯಲ್ಲಿ ಅತಿ ಶೀಘ್ರವೇ ಅಗ್ನಿಶಾಮಕ ಠಾಣೆಯ ಮಂಜೂರಾತಿ ದೊರೆಯುವ …
Read More »
inmudalgi
ಜೂನ್ 2, 2021 Recent Posts, ತಾಲ್ಲೂಕು, ಬೆಳಗಾವಿ
ಬೆಟಗೇರಿ:ಸತೀಶ್ ಶುಗರ್ಸ್ ಲಿ. ಗೋಕಾಕ ಇವರಿಂದ ಉಚಿತವಾಗಿ ನೀಡುತ್ತಿರುವ ಸ್ಯಾನಿಟೈಸರ್ ಹಾಗೂ ಮಾಸ್ಕ್‍ಗಳನ್ನು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಆಶಾ ಮತ್ತು ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಿಬ್ಬಂದಿಗೆ ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಬುಧವಾರ ಜೂ.2ರಂದು ವಿತರಿಸಲಾಯಿತು. ಕೌಜಲಗಿ ಗ್ರಾಮದ ಯುವ ಧುರೀಣ ಮಂಜುನಾಥ ಸಣ್ಣಕ್ಕಿ ಅವರು ಶಾಸಕ ಸತೀಶ್ ಜಾರಕಿಹೊಳಿ ಅವರ ಪರವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಮತ್ತೀತರ ಪರಿಕರಗಳನ್ನು ವಿತರಿಸಿ ಮಾತನಾಡಿ, ಸತೀಶ್ ಶುಗರ್ಸ್ …
Read More »
inmudalgi
ಜೂನ್ 2, 2021 Recent Posts, ತಾಲ್ಲೂಕು, ಬೆಳಗಾವಿ
ನಿಧನ ವಾರ್ತೆ ನೀಲಮ್ಮ ಕಲ್ಲಪ್ಪ ಹುಬ್ಬಳ್ಳಿ. ಬೆಟಗೇರಿ: ಗ್ರಾಮದ ನಿವಾಸಿ, ಲಿಂಗಾಯತ ಸಮಾಜದ ಹಿರಿಯರಾದ ನೀಲಮ್ಮ ಕಲ್ಲಪ್ಪ ಹುಬ್ಬಳ್ಳಿ(96) ಇವರು ಮಂಗಳವಾರ ಜೂ.1ರಂದು ನಿಧನರಾದರು. ಮೃತರಿಗೆ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ.
Read More »