inmudalgi
ನವೆಂಬರ್ 21, 2024 ಬೆಳಗಾವಿ, ರಾಜ್ಯ
ಪ್ರತಿಯೊಬ್ಬರು ಶೌಚಾಲಯ ಬಳಕೆ ಮಾಡಿ: ವಿನಯಕುಮಾರ ನಾಯ್ಡು ಬೆಟಗೇರಿ: ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆ-ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರು ಶೌಚಾಲಯ ಬಳಕೆ ಮಾಡಿರಿ ಎಂದು ಗೋಕಾಕ ತಾಲೂಕ ಪಂಚಾಯತ ಎಡಿ ವಿನಯಕುಮಾರ ನಾಯ್ಡು ಹೇಳಿದರು. ಬೆಳಗಾವಿ ಜಿಲ್ಲಾ ಪಂಚಾಯತ, ಗೋಕಾಕ ತಾಲೂಕ ಪಂಚಾಯತ ಹಾಗೂ ಬೆಟಗೇರಿ ಗ್ರಾಮ ಪಂಚಾಯತ ಸಹಯೋಗದಲ್ಲಿ ನಡೆದ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹನಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶೌಚಾಲಯ …
Read More »
inmudalgi
ನವೆಂಬರ್ 21, 2024 ಬೆಳಗಾವಿ, ರಾಜ್ಯ
ಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘ ಉತ್ತಮ ಸಹಕಾರ ಸಂಘ ಪ್ರಶಸ್ತಿಗೆ ಭಾಜನವಾಗಿದೆ. ಸಪ್ತ ಸಹಕಾರಿ ತತ್ವಗಳ ತಳಹದಿಯ ಮೇಲೆ ಕಾರ್ಯನಿರ್ವಹಿಸುತ್ತಾ ರಾಷ್ಟ್ರದ ಬೆನ್ನೆಲುಬಾಗಿರುವ ರೈತನಿಗೆ ಬೆನ್ನೆಲುಬಾಗಿ ಪಾರದರ್ಶಕ ಆಡಳಿತ, ಪರಿಶುದ್ಧ ಹಾಲು ಸಂಗ್ರಹಣೆ, ರೈತರಿಗೆ ರಿಯಾಯ್ತಿ ದರದಲ್ಲಿ ಹೈನುಗಾರಿಕೆಗೆ ಬೇಕಾಗುವ ಉಪಕರಣಗಳು ಹಾಗೂ ಸರಕಾರದ …
Read More »
inmudalgi
ನವೆಂಬರ್ 20, 2024 ಬೆಳಗಾವಿ, ರಾಜ್ಯ
ಮೂಡಲಗಿ: ದಿವಂಗತ ಸಂಗಣ್ಣಬಸವ ಸ್ವಾಮೀಜಿಗಳ ಸತತ ಪ್ರಯತ್ನದ ಫಲವಾಗಿ ಬಳೋಬಾಳ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಶ್ರದ್ದಾ ಕೇಂದ್ರವಾಗಿ ಬಸವ ಯೋಗ ಮಂಟಪ ಇಂದು ಅತ್ಯುತ್ತಮವಾಗಿ ಬೆಳೆಯುತ್ತಿದೆ. ಇದು ಬರುವ ದಿನಗಳಲ್ಲಿ ಬಸವ ತತ್ವ ಅನುಷ್ಠಾನದ ಮಹಾನ ಕೇಂದ್ರವಾಗಿ ಬೆಳೆಯಲಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಶುಭ ಹಾರೈಸಿದರು. ಮಂಗಳವಾರ ನ-19 ರಂದು ಅರಭಾವಿ ಮತಕ್ಷೇತ್ರದ ಬಳೋಬಾಳ ಗ್ರಾಮದ ಬಸವ ಯೋಗ ಮಂಟಪದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ …
Read More »
inmudalgi
ನವೆಂಬರ್ 20, 2024 ಬೆಳಗಾವಿ, ರಾಜ್ಯ
ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು ಮುಖ್ಯವಾಗಿರುವುದರಿಂದ ತಾಯಿಂಯದಿರು ತಿಳಿದುಕೊಳ್ಳುವುದು ಮುಖ್ಯ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ ಕೋಣಿ ತಿಳಿಸಿದರು. ಮಂಗಳವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆ. ಎಚ್. ಐ ಕಾಲೇಜ ಹಾಗೂ ಸ್ಕೂಲ್ ಆಫ್ ನರ್ಸಿಂಗ್ ಘಟಪ್ರಭಾ ಮತ್ತು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಜರುಗಿದ, “ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ …
Read More »
inmudalgi
ನವೆಂಬರ್ 20, 2024 ಬೆಳಗಾವಿ, ರಾಜ್ಯ
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು 24ನೇ ಜನ್ಮ ದಿನಾಚರಣೆ 24 ಸಾವಿರ ಸಸಿ ನೆಡುವ ಕಾರ್ಯಕ್ಕೆ ವಿವಿಧ ಸ್ವಾಮಿಜಿಗಳಿಂದ ಚಾಲನೆ ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಕಳೆದು ಮೂರನಾಲ್ಕು ವರ್ಷಗಳಿಂದ ಜನ ಸಾಮಾನ್ಯರ ಜೋತೆ ಬೆರೆಯುತ್ತಿರುವ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರ 24 ನೇ ಜನ್ಮ ದಿನಾಚರಣೆ ನಿಮಿತ್ಯ 24 ಸಾವಿರ ಸಸಿ ನೆಡುವ ಕಾರ್ಯವನ್ನು ಹಮ್ಮಿಕೊಂಡಿರುವುದ ಶ್ಲಾಘನಿಯ ಎಂದು ಮುನ್ಯಾಳ-ರಂಗಾಪೂರ ಹಾಗೂ ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ …
Read More »
inmudalgi
ನವೆಂಬರ್ 20, 2024 ಬೆಳಗಾವಿ, ರಾಜ್ಯ
16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ: ಬೈಕ್ ರ್ಯಾಲಿಗೆ ಚಾಲನೆ ಮೂಡಲಗಿ : ಪಟ್ಟಣದಲ್ಲಿ ನ.23, 24 ರಂದು ಜರುಗಲಿರುವ ಬೆಳಗಾವಿ ಜಿಲ್ಲಾ 16 ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮಂಗಳವಾರ ಸಂಜೆ ಮೂಡಲಗಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬೈಕ್ ರ್ಯಾಲಿಗೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೆಂಕಟೇಶ ಸೋನವಾಲಕರ, ವಕೀಲರ ಸಂಘದ ಅಧ್ಯಕ್ಷ ಆರ್.ಆರ್.ಬಾಗೋಜಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಗಿರೇನ್ನವರ ಚಾಲನೆ ನೀಡಿದರು. ರ್ಯಾಲಿಯು …
Read More »
inmudalgi
ನವೆಂಬರ್ 19, 2024 ಬೆಳಗಾವಿ, ರಾಜ್ಯ
ಕುಲಗೋಡ: ಸಾಂಕ್ರಾಮಿಕ ರೋಗದಿಂದ ಜನರ ಕಾಪಾಡಲು, ಬಯಲು ಶೌಚ್ಛ ಮುಕ್ತಮಾಡಿ ಸ್ವಚ್ಛ ಮತ್ತು ಸುರಕ್ಷತೆ ಬದುಕು ಸಾಗಿಸಲು ಸರಕಾರ ಈ ಯೋಜನೆ ತಂದಿದ್ದು. ಮನೆಗೊಂದು ಶೌಚಾಯಲ ನಿರ್ಮಿಸುವ ಗುರಿ ಸರಕಾರ ಹೊಂದಿದ್ದು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಮೂಡಲಗಿ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರು ಚಂದ್ರಶೇಖರ ಬಾರಕಿ ಹೇಳಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇಂದು ಮುಂಜಾನೆ ವಿಶ್ವ ಶೌಚಾಲಯ ದಿನ ಕಾರ್ಯಕ್ರಮಕ್ಕೆ …
Read More »
inmudalgi
ನವೆಂಬರ್ 19, 2024 ಬೆಳಗಾವಿ, ರಾಜ್ಯ
ಗೋಕಾಕ: ಯುವ ನಾಯಕರು, ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕರೂ ಆಗಿರುವ ಸರ್ವೋತ್ತಮ ಜಾರಕಿಹೊಳಿ ಅವರ ೨೪ ನೇ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿ ಕಾರ್ಯಕರ್ತರು ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಬೆಳಗಿನ ಉಪಹಾರ ವಿತರಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ ಮಾತನಾಡಿ, ಸರ್ವೋತ್ತಮ ಜಾರಕಿಹೊಳಿ ಅವರು ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ …
Read More »
inmudalgi
ನವೆಂಬರ್ 18, 2024 ಬೆಳಗಾವಿ, ರಾಜ್ಯ
ಮಾನವ ಕುಲದ ಐಕ್ಯತೆ ಚಿಂತನಕಾರರಲ್ಲಿ ಕನಕದಾಸರು ಶ್ರೇಷ್ಟರು : ಸಂಜೀವ ಮಂಟೂರ. ಮೂಡಲಗಿ : ಮಾನವ ಕುಲದ ಐಕ್ಯತೆ ಚಿಂತನಕಾರರಲ್ಲಿ ಕನಕದಾಸರು ಶ್ರೇಷ್ಟರು. ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೇಲೆಯನೇನಾದರೂ ಬಲ್ಲಿರಾ…. ಎಂದು ಸಮಾಜ ಸುದಾರಕರಾಗಿ 15-16 ನೇ ಶತಮಾನದಲ್ಲಿ ಭಾರತೀಯ ಧಾರ್ಮಿಕ ಅಂದೋಲನದ ಪ್ರತಿಪಾದನೆಯನ್ನು ಕನಕದಾಸರು ಮಾಡಿದರು ಅಲ್ಲದೇ ಜನರಲ್ಲಿ ಇರುವ ಜೀವನದ ಮೌಢತ್ಯೆಗಳನ್ನು ದಾಸ ಸಾಹಿತ್ಯದ ಮೂಲಕ ಜನರಿಗೆ ತಿಳುವಳಿಕೆ ನೀಡಿದರು ಅವರ ದಾಸಸಾಹಿತ್ಯವು ಪ್ರಸ್ತುತ …
Read More »
inmudalgi
ನವೆಂಬರ್ 18, 2024 ಬೆಳಗಾವಿ, ರಾಜ್ಯ
*ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.* ಗೋಕಾಕ- ನಾಡಿನಾದ್ಯಂತ ನಡೆಯುತ್ತಿರುವ ಸಂತ ಶ್ರೇಷ್ಠ ಕನಕದಾಸರ ಜಯಂತಿಗೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಶುಭ ಕೋರಿದ್ದಾರೆ. ಕನಕದಾಸರು ಸರ್ವ ಶ್ರೇಷ್ಠ ದಾಸರು. ಇತರ ದಾಸರಿಗಿಂತ ಭಿನ್ನವಾದವರು. ಸಾಮಾನ್ಯನ ಬದುಕು ಹಸನಾಗಬೇಕು ಎಂಬ ಹಂಬಲ ಅವರದ್ದಾಗಿತ್ತು. ಕನ್ನಡ ಮನಸ್ಸಿನ ವೈಚಾರಿಕ ಪರಂಪರೆಯ ಮಹತ್ವದ ಕೊಂಡಿಯಾಗಿದ್ದರು ಕನಕದಾಸರು. ಕೇಡುಗಳಿಲ್ಲದ ವರ್ಗ, …
Read More »