Breaking News
Home / Recent Posts / ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

Spread the love

ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ದ್ಯಾಮವ್ಯದೇವಿ ಹಾಗೂ ಲಕ್ಷ್ಮೀದೇವಿ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮವನ್ನು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಉದ್ಘಾಟಿಸಿದರು

 

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀ ಆರಾಧÀ್ಯದೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಬೇಧ ಬಿಟ್ಟು ಸಾಮರಸ್ಯತೆಯನ್ನು ಬೆಳೆಸುವುದು ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ತಾಲ್ಲೂಕಿನ ಹಳ್ಳೂರ ಗ್ರಾಮದ ದ್ಯಾಮವ್ವದೇವಿ ಹಾಗೂ ಲಕ್ಷ್ಮೀದೇವಿ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಜಾನಪದ ಕಲಾ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾಡಿನ ಜಾನಪದ ಸಂಪ್ರದಾಯ, ಆಚರಣೆಗಳಿಗೆ ತೊಟ್ಟಿಲು ಗ್ರಾಮೀಣ ಜಾತ್ರೆಗಳಾಗಿವೆ ಎಂದರು.
ಕರ್ನಾಟಕದಲ್ಲಿ 300ಕ್ಕೂ ಅಧಿಕ ಜಾನಪದ ಕಲಾ ಪ್ರಕಾರಗಳಿದ್ದು, ಬೆಳಗಾವಿಯಲ್ಲಿ 50ಕ್ಕೂ ಅಧಿಕ ಜಾನಪದ ಕಲಾ ಪ್ರಕಾರಗಳಿಗೆÀ ತವರೂರಾಗಿದೆ.
ಶ್ರೀಕೃಷ್ಣ ಪಾರಿಜಾತ, ದೊಡ್ಡಾಟ, ಲಾವಣಿ, ಗೀಗೀ ಹಾಡು, ಭಜನೆ, ಮೋಹರಂ, ಹಂತಿ, ಡೊಳ್ಳು, ಚೌಡಕಿ, ಸಂಗ್ಯಾ ಬಾಳ್ಯಾ ಆಟ ಹೀಗೆ
ಬೆಳಗಾವಿ ಜಿಲ್ಲೆಯು ಜಾನಪದ ಕಲೆಗಳು ಬೆಳೆದು ಬಂದಿವೆ ಎಂದರು.
ಆಧುನಿಕತೆ ಒತ್ತಡದಲ್ಲಿ ಜಾನಪದ ಕಲೆಗಳು ನಶಿಸಿ ಹೊರಟಿರುವುದು ವಿಷಾದನೀಯವಾದ ಸಂಗತಿಯಾಗಿದೆ ಎಂದರು.
ನಾಡಿನ ವಿವಿಧ ಆಚರಣೆ, ಪರಂಪರೆ ಹಾಗೂ ಸಂಸ್ಕøತಿ ಉಳಿಯಬೇಕಾದರೆ ಜಾನಪದ ಕಲೆಗಳು, ಆಚರಣೆಗಳು ಉಳಿಯಬೇಕು ಮತ್ತು ಸಮಾಜವು ಅವುಗಳನ್ನು ಬೆಳೆಸಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಗ್ರಾಮೀಣ ಭಾಗದಲ್ಲಿರುವ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಮಾಸಾಶನ ದೊರಕಿಸಿಕೊಡುವ ಮೂಲಕ ಜಾನಪದ ಕಲೆಯ ಬಗ್ಗೆ ಅವರಲ್ಲಿ ಉತ್ಸಾಹವನ್ನು ಇಮ್ಮಡಿಸಬೇಕು ಎಂದರು.
ಸಂಘಟಕ ಸಿದ್ದು ದುರದುಂಡಿ ಪ್ರಾಸ್ತಾವಿಕ ಮಾತನಾಡಿ ನಾಡಿನ ವಿವಿಧೆಡೆಯಿಂದ ಒಟ್ಟು 20 ಜಾನಪದ ಕಲಾ ತಂಡಗಳು ಭಾಗವಹಿಸಿವೆ ಎಂದರು.
ಸಮಾರಂಭದ ವೇದಿಕೆಯಲ್ಲಿ ಬಸವಣ್ಣೆಪ್ಪ ಡಬ್ಬಣ್ಣವರ, ಭೀಮಶಿ ಹೊಸಟ್ಟಿ, ಎಂ.ಡಿ. ಸಂತಿ, ಬಾಳಗೌಡ ಪಾಟೀಲ, ಭೀಮಪ್ಪ ಸಪ್ತಸಾಗರ, ಬಸವರಾಜ ಕೌಜಲಗಿ, ಶಿವಪ್ಪ ಅಟಮಟ್ಟಿ, ಮುರಿಗೆಪ್ಪ ಮಾಲಗಾರ, ಸಿದ್ದು ಮಹಾರಾಜ, ಯಮನಪ್ಪ ನಿಡೋಣಿ, ಲಕ್ಕಪ್ಪ ದುರದುಂಡಿ, ಬಸಪ್ಪ ದಾಸಣ್ಣವರ, ಸೈದುಸಾಬ ಮುಜಾವರ ಇದ್ದರು.


Spread the love

About inmudalgi

Check Also

ಬೆಟಗೇರಿ ಗ್ರಾಮ ಬೇಗ ಮಾದರಿ ಗ್ರಾಮವಾಗಲಿ: ಈರಯ್ಯ ಹಿರೇಮಠ

Spread the loveಬೆಟಗೇರಿ ಗ್ರಾಮ ಬೇಗ ಮಾದರಿ ಗ್ರಾಮವಾಗಲಿ: ಈರಯ್ಯ ಹಿರೇಮಠ ಬೆಟಗೇರಿ:ಸ್ಥಳೀಯ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಬೆಟಗೇರಿ ಗ್ರಾಮದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ