ಮೂಡಲಗಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ
ಮೂಡಲಗಿ: ಮೂಡಲಗಿ ತಹಶೀಲ್ದಾರ ಕಛೇರಿಯಲ್ಲಿ ತಾಲೂಕಾ ಆಡಳಿತ ಮತ್ತು ಮೂಡಲಗಿ ತಾಲೂಕಾ ಮಡಿವಾಳ ಮಾಚಿದೇವರ ಸೇವಾ ಸಂಘದ ಆಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲ್ಲಾಯಿತು.
ಸಮಾರಂಭದಲ್ಲಿ ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ ಮಾತನಾಡಿ, 12ನೇ ಶತಮಾನದಲ್ಲಿ ಬಾಳಿ-ಬೆಳಗಿದ ಮಹಾನ ಸತ್ಪುರುಷ ಶರಣ ಮಡಿವಾಳ ಮಾಚಿದೇವರ ಸೂಚನೆ, ಸೂತ್ರಗಳನ್ನು ಅರಿತುಕೊಂಡು ಮತ್ತು ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪಾವನ-ಸಾರ್ಥಕತೆ ಯಾಗುತ್ತದೆ ಎಂದ ಅವರು ಮಹಾನ ಸತ್ಪುರಷ ಅವರ ಮಾಡಿದಹಂತ ತ್ಯಾಗ, ಕಾಯಕಗಳು ಸಮಾಜಕ್ಕೆ ಶ್ರೇಷ್ಠಮಟ್ಟದಾಗಿದ್ದರಿಂದ ಅವರನ್ನು ಇಂದು ಸ್ಮರಿಸುತ್ತಿದೆವೆ, ಸಮಾಜ ಭಾಂಧವರು ಸಂಘಟಿತರಾಗಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಿ ಸಮಾಜ ಅಭಿವ್ರದ್ಧಿಗೆ ಶ್ರಮಿಶಬೇಕೆಂದರು.
ಸಮಾರಂಭದಲ್ಲಿ ಸಮಾಜದ ಹಿರಿಯರಾದ ಮೂಡಲಗಿಯ ಬಸವರಾಜ ಮಡಿವಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದ ವೇದಿಕೆಯಲ್ಲಿ ಮೂಡಲಗಿ ತಾಲೂಕಾ ಮಡಿವಾಳ ಮಾಚಿದೇವರ ಸೇವಾ ಸಂಘದ ಅಧ್ಯಕ್ಷ ಶಿವಾನಂದ ಮಡಿವಾಳರ, ಉಪಾಧ್ಯಕ್ಷ ಗೀರೀಶ ಮಡಿವಾಳ, ಕಾರ್ಯದರ್ಶಿ ಸುರೇಶ ಮಡಿವಾಳ, ಖಜಾಂಚಿ ಮಂಜುನಾಥ ಮಡಿವಾಳರ, ಬಸವರಾಜ ಅಗಸರ, ಜಗದೀಶ ಮಡಿವಾಳ, ಶ್ರೀಶೈಲ್ ಮಡಿವಾಳ, ಕಾಡಪ್ಪ ಮಡಿವಾಳ, ಹನಮಂತ ಮಡಿವಾಳ, ಮಂಜುನಾಥ ಕಮಲದಿನ್ನಿ, ಸರ್ವ ಸದಸ್ಯರು ಹಾಗೂ ತಾಲೂಕಿನ ದುರದುಂಡಿ. ಯಾದವಾಡ, ಕಲ್ಲೋಳಿ, ಅರಭಾಂವಿ, ಕಮಲದಿನ್ನಿ, ಸುಣಧೋಳಿ, ಭೈರನಟ್ಟಿ, ಕುಲಗೋಡ, ಬಿಸನಕೊಪ್ಪ, ಸಂಗನಕೇರಿ, ಪುಲಗಡ್ಡಿ, ಮಸಗುಪ್ಪಿ, ರಾಜಾಪೂರ, ಬಡಿಗವಾಡ, ಹುಣಶ್ಯಾಳ, ಢವಳೇಶ್ವರ,ಅವರಾದಿ, ವೆಂಕಟ್ಯಾಪೂರ, ಮನ್ನಾಪೂರ ಗ್ರಾಮದ ಸಮಾಜ ಭಾಂಧವರು ಹಾಗೂ ತಹಶೀಲ್ದಾರ ಕಚೇರಿ ಸಿಬ್ಬಂದಿ ವರ್ಗದವರು ಭಾಗವಹಿಸಿದರು.
ರವಿ ಮಡಿವಾಳ ನಿರೂಪಿಸಿದರು, ಶಿವಾನಂದ ಮಡಿವಾಳ ಸ್ವಾಗತಿಸಿದರು, ಹಣಮಂತ ಮಡಿವಾಳ ವಂದಿಸಿದರು.