ವರದಿ: ಅಡಿವೇಶ ಮುಧೋಳ.
ಬೆಟಗೇರಿ: ನಿಮ್ಮ ಧೃಢ ಮನಸ್ಸಿನ ಭಕ್ತಿ ದೇವರದಡೆ
ಕರೆದುಕೊಂಡು ಹೋಗುತ್ತದೆ. ಮುಗ್ಧ ಮನಸ್ಸಿನ ಬಲ್ಲಾಳ
ನಂಬಿಕೆಯ ಭಕ್ತಿ ಮೂಲಕ ಕುರಿ ಹಿಕ್ಕಿಯಲ್ಲಿ ಲಿಂಗದ ರೂಪದಲ್ಲಿ ಪರಮಾತ್ಮನನ್ನು ಕಾಣುತ್ತಾನೆ. ಇಂದು ಪ್ರಸಿದ್ಧ ಬಲ್ಲಾಳೇಶ್ವರ ಸುಕ್ಷೇತ್ರವಾಗಿ ಉಳಿದಿದೆ ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರ ಸಹಯೋಗದಲ್ಲಿ ಬಸವ ಜಯಂತಿ ಹಾಗೂ 775 ವರ್ಷ ಬಾಳಿದ ಹೊಸಳ್ಳಿ ಮಹಾತಪಸ್ವಿ ಜಗದ್ಗುರು ಬೂದೀಶ್ವರ ಮಹಾಶಿವಯೋಗಿಗಳ ಶಿಲಾ ಮಂಟಪ ಲೋಕಾರ್ಪಣೆ ನಿಮಿತ್ಯ ಬೆಟಗೇರಿ ಗ್ರಾಮದಲ್ಲಿ ಪ್ರಪ್ರಥಮವಾಗಿ ಇದೇ ಏ.26ರಿಂದ ಏ.30ರವರೆಗೆ ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಹಮ್ಮಿಕೊಂಡ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಏ.27ರಂದು ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ನಡೆದ ಪ್ರವಚನದಲ್ಲಿ ಮಾತನಾಡಿದ ಅವರು, ನಿಮ್ಮ ನಿಸ್ವಾರ್ಥ ಭಕ್ತಿಯಿಂದ ದೇವರನ್ನು ಕಾಣಬಹುದು ಎಂದರು.
ಭಕ್ತಿಯಿಂದ ಭಗವಂತನ ದರ್ಶನವಾಗುತ್ತದೆ. ಆಸ್ತಿ ಮತ್ತು
ಅಂತಸ್ತಗಳಿಗೆ, ಶಾಲು ಮತ್ತು ಮಾಲೆಗಳಿಗೆ ದೇವರು
ಒಲಿಯುವುದಿಲ್ಲಾ, ನಿನ್ನ ಮಗ್ಧ ಮನಸ್ಸಿನ ಪ್ರೀತಿಯ ಭಕ್ತಿಯಿಂದ ದೇವರು ಒಲಿಯುತ್ತಾನೆ. ದೇವರ ಮೇಲೆ ಧೃಡವಾದ ನಂಬಿಕೆ ಇರಬೇಕು. ದೇವರ ಒಲುಮೆಯಾಗಬೇಕಾದರೆ ನಿಸ್ಕಾಮ ಮತ್ತು ಪ್ರೀತಿಯ ಭಕ್ತಿ ಇರಬೇಕು ಅಂತಾ ಹಲವಾರು ದೃಷ್ಟಾಂತಗಳನ್ನು ಹೇಳುವುದರ ಮೂಲಕ ಭಕ್ತಿ ಎಂಬ ವಿಷಯದ ಮೇಲೆ ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಪ್ರವಚನ ಹೇಳಿದರು.
ಸ್ಥಳೀಯ ಪ್ರವಚನ ಕಾರ್ಯಕ್ರಮಕ್ಕೆ ತನು, ಮನ, ಧನ
ಸಹಾಯ, ಸಹಕಾರ ನೀಡಿದ ದಾನಿಗಳನ್ನು, ಗಣ್ಯರನ್ನು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಅವರು ಸತ್ಕರಿಸಿದರು. ಮಲ್ಲಿಕಾರ್ಜುನ ಕೊಡಗನೂರ ಅವರಿಂದ ತಬಲಾ ಸಾಥದೊಂದಿಗೆ ಕಲ್ಲೂರದ ಶಂಕರಯ್ಯ ಗುರುಮಠ ಅವರಿಂದ ಸಂಗೀತ ಸೇವೆ ನಡೆಯಿತು.
ಕೊಪ್ಪಳ ಶ್ರೀಗಳಿಂದ ಪ್ರವಚನ :
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಏ.30 ರಂದು ಪ್ರವಚನ ಮಂಗಲ ಕಾರ್ಯಕ್ರಮ, ಮುಂಜಾನೆ 8 ಗಂಟೆಗೆ ಗ್ರಾಮದ ವಿವಿಧ ಬೀದಿಗಳಲ್ಲಿ ಬಳಗಾನೂರದ ಶಿವಶಾಂತವೀರ ಶರಣರಿಂದ ಶಿವಭಜನೆ ಮೂಲಕ ಪಾದಯಾತ್ರೆ, ಮುಂಜಾನೆ 10 ಗಂಟೆಗೆ ಕೊಪ್ಪಳ ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ಸ್ಥಳೀಯ ವಿವಿಡಿ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಆಧ್ಯಾತ್ಮಿಕ ಪ್ರವಚನ ಜರುಗಲಿದೆ ಎಂದು ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳ ಪ್ರವಚನ ಆಯೋಜನೆ ಸ್ಥಳೀಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಈಶ್ವರ ಬಳಿಗಾರ, ಶ್ರೀಧರ ದೇಯಣ್ಣವರ, ಬಸವರಾಜ ಪಣದಿ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ದುಂಡಪ್ಪ ಮಾಳೇದ, ಮಲ್ಲಪ್ಪ ಪಣದಿ, ಬಾಳಪ್ಪ ಕನೋಜಿ, ನಿಂಗಪ್ಪ ಕಂಬಿ, ದುಂಡಪ್ಪ ಕಂಬಿ, ಯಲ್ಲಪ್ಪ ಮೇಳೆಣ್ಣವರ, ಸುರೇಶ ನೀಲಣ್ಣವರ, ಭೀಮನಾಯ್ಕ ನಾಯಕರ, ಭರಮಣ್ಣ ಪೂಜೇರ,ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ಸಂತ, ಶರಣರು, ಕೊಪ್ಪಳ ಮತ್ತು ಹೊಸಳ್ಳಿ ಶ್ರೀಗಳ ಪ್ರವಚನ ಆಯೋಜನೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯಲ್ಲಿ ಭಕ್ತ ಜನ ಸಮೂಹ ಈ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
IN MUDALGI Latest Kannada News