ಭಾರತ ಲಾಕ್‍ಡೌನ್ ಅನ್ನು ಮೇ 18ರಿಂದ 31ರವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.
ಹೌದು, ಭಾರತ ಲಾಕ್‍ಡೌನ್ ಮೂರನೇ ಅವಧಿ ಸೋಮವಾರ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್‍ಡೌನ್ ಅವಧಿ ವಿಸ್ತರಿಸಿದ್ದು, ಮೇ 31ರವರೆಗೂ ನಾಲ್ಕನೇ ಲಾಕ್‍ಡೌನ್ ಅವಧಿ ಮುಂದುವರಿಯಲಿದೆ.
ಸದ್ಯ ದೇಶದಲ್ಲಿ 30 ನಗರಗಳನ್ನು ರೆಡ್ ಝೋನ್ ಎಂದು ಗುರುತಿಸಲಾಗಿದೆ. ಈ ನಗರಗಳನ್ನು ಕಂಪ್ಲೀಟ್ ಲಾಕ್‍ಡೌನ್ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರ ಮಾರ್ಗಸೂಚಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.