Breaking News
Home / ತಾಲ್ಲೂಕು / ಪತ್ರಿಕಾರಂಗವೂ ಎಚ್ಚರವಿದ್ದರೆ ಸಮಾಜವೇ ಎಚ್ಚರವಾಗಿರುತ್ತದೆ- ಮಲ್ಲಿಕಾರ್ಜುನ ಸಿಂಧೂರ

ಪತ್ರಿಕಾರಂಗವೂ ಎಚ್ಚರವಿದ್ದರೆ ಸಮಾಜವೇ ಎಚ್ಚರವಾಗಿರುತ್ತದೆ- ಮಲ್ಲಿಕಾರ್ಜುನ ಸಿಂಧೂರ

Spread the love

ಮೂಡಲಗಿ: ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗವು ಅಸ್ತವ್ಯಸ್ಥವಾದಾಗ ಸರಿಯಾದ ದಿಕ್ಕಿನತ್ತ ಸಾಗುವಂತೆ ಮಾಡುವ ಜವಾಬ್ದಾರಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗಕ್ಕಿದೆ. ಸಮಾಜ ಸುಧಾರಣೆಗಾಗಿ ಶ್ರಮಿಸುತ್ತಿರುವ ಪತ್ರಕರ್ತರಿಗೆ ಸಮಾಜದಲ್ಲಿ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮೂಡಲಗಿ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ ಹೇಳಿದರು.
ಅವರು ಸ್ಥಳೀಯ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಪತ್ರಕರ್ತರ ಸತ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಖಡ್ಗಕ್ಕಿಂತ ಲೇಖನಿ ಹರಿತವಾದದ್ದು. ಪತ್ರಿಕಾರಂಗವು ಪ್ರಜಾಪ್ರಭುತ್ವ ದೇಶದ ಆಧಾರ ಸ್ತಂಭವಾಗಿದೆ. ಪತ್ರಿಕಾರಂಗವೂ ಎಚ್ಚರವಿದ್ದರೆ ಸಮಾಜವೇ ಎಚ್ಚರವಾಗಿರುತ್ತದೆ. ಪತ್ರಿಕಾ ಮಾಧ್ಯಮವೂ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೇ ಸಮಾಜದ ಎಲ್ಲ

ಅಂಕುಡೊಂಕುಗಳನ್ನು ತಿದ್ದಿ ಸಮಾಜದ ಅಭಿವೃದ್ದಿಗೆ ಸ್ಪಂದಿಸುವಂತಾಗಬೇಕು. ಪತ್ರಕರ್ತರು ನಿಷ್ಪಕ್ಷಪಾತವಾಗಿ ಕೆಲಸ ಮಾಡಿದರೆ ದೇಶದ ಅಭಿವೃದ್ದಿ ಸಾಧ್ಯವಿದೆ ಎಂದರು.
ನಿವೃತ್ತ ಗ್ರಂಥಪಾಲಕ ಬಾಲಶೇಖರ ಬಂದಿ ಪ್ರಸ್ತಾವಿಕವಾಗಿ ಮಾತನಾಡಿ, ಪತ್ರಿಕಾ ದಿನಾಚರಣೆಯೂ ಪತ್ರಕರ್ತರ ಕಾರ್ಯ ಚಟುವಟಿಕೆಯನ್ನು ಗುಣಗಾನ ಮಾಡುವ ದಿವಸವಾಗಿದೆ. ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಯ ಪಾತ್ರ ಪ್ರಮುಖವಾಗಿದ್ದು, ಕರೋನದ ಕಾರ್ಯಚಟುವಟಿಕೆಯಲ್ಲಿ ಎಲ್ಲ ಇಲಾಖೆಗಳ ಜೊತೆಯಲ್ಲಿ ಪತ್ರಿಕಾರಂಗದ ಕಾರ್ಯವೂ ಶ್ಲಾಘನೀಯವಾಗಿದೆ.  ಯುವ ಪತ್ರಕರ್ತರು ಸತ್ಯ ಸತ್ಯತೆಯನ್ನು ಕಲೆಹಾಕಿ ಮಾಹಿತಿ ಪೂರ್ಣ ಸುದ್ದಿಯನ್ನು ಬರೆಯುವಂತರಾಗಬೇಕು. ಉತ್ತಮ ಭಾಷೆ ಮತ್ತು ಜ್ಞಾನ ಹೊಂದಿರುವುದು ಬಹು ಮುಖ್ಯವಾಗಿದೆ ಎಂದರು.

ಮೂಡಲಗಿ ಕಸಾಪ ಅಧ್ಯಕ್ಷ ಸಿದ್ರಾಮ ದ್ಯಾಗನಟ್ಟಿ ಮಾತನಾಡಿ, ಎಲೆಮರೆಯ ಕಾಯಿಯಂತೆ ಸಮಾಜ ಕಾರ್ಯಗಳನ್ನು ಮಾಡುತ್ತಿರುವ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಪತ್ರಕರ್ತರು ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಕಸಾಪದಿಂದ ಪತ್ರಿಕಾ ದಿನಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.

ಮುಖಂಡರಾದ ಬಿ.ಬಿ ಹಂದಿಗುಂದ ಅಧ್ಯಕ್ಷತೆವಹಿಸಿ ಮಾತನಾಡಿ, ಪತ್ರಕರ್ತರನ್ನು ಸನ್ಮಾನಿಸುತ್ತಿರುವ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಕಾರ್ಯ ಶ್ಲಾಘನೀಯವಾಗಿದೆ ಪತ್ರಕರ್ತರು ಸಮಾಜದ ಸ್ವಾಸ್ಥ್ಯ ಕೆಡಿಸುವ ಮತ್ತು ಸಮಾಜ ಒಡೆಯುವ ಕೆಲಸ ಮಾಡದೇ ನಾಡಿನ ಅಭಿವೃದ್ದಿಗಾಗಿ ಶ್ರಮಿಸಬೇಕು ಎಂದರು.

ವೇದಿಕೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ ಖೋಣಿ, ಪುರಸಭೆ ಆರೋಗ್ಯ ನೀರಿಕ್ಷಕ ಚಿದಾನಂದ ಮುಗಳಖೋಡ, ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ಅಡಿಹುಡಿ, ಕರ್ನಾಟಕ ಪತ್ರಕರ್ತರ ಸಂಘದ  ಎಲ್.ಸಿ. ಗಾಡವಿ, ಮೂಡಲಗಿ ತಾಲೂಕ ಪ್ರೆಸ್ ಅಸೋಶಿಯೇಶನ್ ಅಧ್ಯಕ್ಷ ಸುಧಾಕರ ಉಂದ್ರಿ, ಪಿಎಸ್‍ಐ ಆನಂದ ಕಂಕಣವಾಡಿ, ಮಾಜಿ ಸೈನಿಕ ಎಂ.ಡಿ. ಮಹಾದೇವ, ಜಾನಪದ ಗಾಯಕ ಶಬ್ಬಿರ ಡಾಂಗೆ ವೇದಿಕೆಯಲ್ಲಿದ್ದರು.

ಸಂಸ್ಥೆಯಿಂದ ಎಲ್ಲ ಪತ್ರಕರ್ತರಿಗೆ ಸವಿ ನೆನಪಿನ ಕಾಣಿಕೆ ನೀಡಿ ಸತ್ಕಾರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕ ಪ್ರೆಸ್ ಅಸೋಶಿಯೇಶನ್ ಉಪಾಧ್ಯಕ್ಷ ಎಸ್.ಎಮ್.ಚಂದ್ರಶೇಖರ, ಈರಪ್ಪ ಢವಳೇಶ್ವರ, ಯಲ್ಲಾಲಿಂಗ ವಾಳದ, ಶಶಿಧರ ಆರಾಧ್ಯ, ರಾಮಣ್ಣ ಮಂಟೂರ, ಯಲ್ಲಪ್ಪ ಖಾನಟ್ಟಿ ಪತ್ರಕರ್ತರಾದ ಉಮೇಶ ಬೆಳಕೊಡ, ವಿ.ಎಚ್, ಬಾಲರೆಡ್ಡಿ, ಕೃಷ್ಣ ಗಿರೆನ್ನವರ, ಕೆ.ಎಲ್.ಮೀಶಿ, ಸುಭಾಸ್ ಕಡಾಡಿ, ಶಂಕರ ಹಾದಿಮನಿ, ಸುಧೀರ ನಾಯರ್, ಸುಭಾಸ ಗೊಡ್ಯಾಗೋಳ, ಅಲ್ತಾಫ್ ಹವಾಲ್ದಾರ, ಮಹಾದೇವ ನಡುವಿನಕೇರಿ, ಶಿವಾನಂದ ಹಿರೇಮಠ, ಶಿವಾನಂದ ಮರಾಠೆ, ಭಗವಂತ ಉಪ್ಪಾರ, ರಾಜಶೇಖರ ಮಗದುಮ್, ಮಲ್ಲು ಬೋಳನ್ನವರ, ಸುರೇಶ ಪಾಟೀಲ, ಎಂ.ಎಚ್. ಗೊಡ್ಯಾಗೋಳ, ಜಾನಪದ ಗಾಯಕರಾದ ಆಯೂಬ ಕಲಾರಕೊಪ್ಪ, ಅನೀತ ಒಂಟಗೂಡಿ, ಕಲಾವಿದರಾದ ಓಂ ಸಂತ, ಗೈಬೂ ದೊಡಮನಿ, ಮಂಜುನಾಥ ರೇಳೆಕರ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಿದ್ದಣ್ಣ ದುರದುಂಡಿ ನಿರೂಪಿಸಿದರು. ಲಕ್ಷ್ಮಣ ಅಡಿಹುಡಿ ಸ್ವಾಗತಿಸಿದರು, ಸುಧೀರ ನಾಯರ್ ವಂದಿಸಿದರು.


Spread the love

About inmudalgi

Check Also

ಮೂಡಲಗಿ ನಗರದ ಹಲವು ಗಣ್ಯರಿಗೆ 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ತಿರಂಗ ಧ್ವಜ ವಿತರಣೆ

Spread the loveಮೂಡಲಗಿ: ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವುದರ ಮೂಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ