Breaking News
Home / Recent Posts / ಸುಣಧೋಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿದ ರಾಹುಲ್ ಜಾರಕಿಹೊಳಿ

ಸುಣಧೋಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿದ ರಾಹುಲ್ ಜಾರಕಿಹೊಳಿ

Spread the love

ಸುಣಧೋಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿದ ರಾಹುಲ್ ಜಾರಕಿಹೊಳಿ

ಮೂಡಲಗಿ: ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಅಂಗವಾಗಿ ಸಂಗೊಳ್ಳಿ ರಾಯಣ್ಣನ ನೂತನ ಪ್ರತಿಮೆಯನ್ನು ಕಾಂಗ್ರೆಸ ಯುವ ಮುಖಂಡ ರಾಹುಲ ಜಾರಕಿಹೊಳಿ ಅನಾವರಣಗೊಳಿಸಿದರು.
ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಕೇವಲ ವ್ಯಕ್ತಿಯಲ್ಲ ಒಂದು ಶಕ್ತಿಯಾಗಿದ್ದಾರೆ.ಅವರು ಹುಟ್ಟಿದ ದಿನ ಸ್ವಾತಂತ್ರ್ಯ ದಿನವಾಗಿದ್ದರೆ ಅವರು ನೇಣುಗಂಬಕ್ಕೇರಿದ ದಿನ ದೇಶದ ಗಣತಂತ್ರ(ಜ.26) ದಿನವಾಗಿದೆ.ಇಂತಹ ಮಹಾನ ಪುರುಷರಿಗೆ ಮಾತ್ರ ಈ ರೀತಿಯ ಚಮತ್ಕಾರ ಸಾಧ್ಯ.
ಸಂಗೊಳ್ಳಿ ರಾಯಣ್ಣ ಚಿಕ್ಕ ವಯಸ್ಸಿನಲ್ಲೇ ಜನರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದರು. ಹೊಸ ಯುದ್ಧ ತಂತ್ರಗಳ ಮೂಲಕ ಬ್ರಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು.ಅವರ ಹೋರಾಟವನ್ನು ಇಂದಿನ ಯುವಕರು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು.
ರಾಜ್ಯ ಸರಕಾರ ಎಲ್ಲ ಸರ್ಕಾರಿ ಕಛೇರಿಗಳಲ್ಲಿ ರಾಯಣ್ಣ ಜನ್ನ ದಿನಾಚರಣೆ ಆಚರಿಸಲು ಆದೇಶ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ.ರಾಯಣ್ಣ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳು ರಾಜ್ಯದ ಅನೇಕ ಶಾಲೆಗಳಿಗೆ ಅವರ ಜನ್ಮ ದಿನದ ಪ್ರಯುಕ್ತ ರಾಯಣ್ಣ ಭಾವಚಿತ್ರಗಳನ್ನು ಪೋರೈಕೆ ಮಾಡಿರುವುದಾಗಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸಂಗೊಳ್ಳಿ ರಾಯಣ್ಣ ಅಭಿವೃದ್ದಿ ಪ್ರಾಧಿಕಾರ ರಚಣೆ ಮಾಡಿ 267ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದರು.ಇದರಿಂದ ಇಂದು ಸಂಗೊಳ್ಳಿ ಹಾಗೂ ನಂದಗಡ ಗ್ರಾಮದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ಆಗಿದ್ದು ಅವುಗಳನ್ನು ಪ್ರವಾಸಿ ಸ್ಥಳ ಹಾಗೂ ಪುಣ್ಯಕ್ಷೇತ್ರಗಳನ್ನಾಗಿ ರೂಪಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿನಯ ಕಟ್ಟಿಕಾರ, ಶಿವು ಪಾಟೀಲ, ಅಡಿವೆಪ್ಪ ಕಂಕಾಳಿ, ಸಿದ್ಧಾರೂಢ ವೇವನಗೋಳ, ಬಸಪ್ಪ ದೇವರಮನಿ, ಮುತ್ತು ಜಿಡ್ಡಿಮನಿ, ಅಶೋಕ ನಾಯ್ಕ. ಸಿದ್ದಪ್ಪ ಅಮನಿ, ತಮ್ಮಣ್ಣ ಮೋಕಾನಿ, ಪಾಂಡು ಮನ್ನಿಕೇರಿ, ಸಿದ್ದಾರೂಢ ಕಮತಿ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಕಾರ್ಯದರ್ಶಿ ನಿಂಗಪ್ಪ ಕುರಬೇಟ ಇನ್ನಿತರರು ಇದ್ದರು.


Spread the love

About inmudalgi

Check Also

ಬಸವಣ್ಣನವರು ಸಕಲ ಜೀವಿಗಳಿಗೆ ಶ್ರೇಯಸ್ಸು ಬಯಸಿದ್ದರು: ಬಸವಂತ ಕೋಣಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ